ಶನಿವಾರ, ಏಪ್ರಿಲ್ 4, 2020
19 °C

ಅಮೂಲ್ಯ ದೇಶದ್ರೋಹಿಯಲ್ಲ: ವಕೀಲ ಎಸ್‌.ಮಾರೆಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ‘ಅಮೂಲ್ಯ ಲಿಯೋನ್‌ ದೇಶದ್ರೋಹಿಯಲ್ಲ. ನಮಸ್ತೆ ಟ್ರಂಪ್ ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ದೇಶದ್ರೊಹ ಮಾಡಿದ್ದಾರೆ. ತಮ್ಮ ದೇಶದ್ರೋಹ ಮುಚ್ವಿಕೊಳ್ಳಲು ಹೋರಾಟಗಾರರನ್ನು ಬಂಧಿಸುತ್ತಿದ್ದಾರೆ’ ಎಂದು ವಕೀಲ ಎಸ್‌.ಮಾರೆಪ್ಪ ಹೇಳಿದರು.

‘ಬೆಂಗಳೂರಿನಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅಮೂಲ್ಯ ಲಿಯೋನ್ ಹೇಳಿದ್ದರಲ್ಲಿ ತಪ್ಪಿಲ್ಲ. ಅವಳಿಗೆ ಪೂರ್ಣವಾಗಿ ಮಾತನಾಡಲು ಬಿಡಬೇಕಿತ್ತು. ಅಮೂಲ್ಯಳ ಮಾತುಗಳಿಗೆ ಸಂಪೂರ್ಣ ಬೆಂಬಲ ಇದೆ’ ಎಂದು ಸಮರ್ಥಿಸಿಕೊಂಡರು.

‘ಸಂಪೂರ್ಣ ಮಾತನಾಡಲು ಬಿಡದೆ ಕೇಸ್ ಹಾಕಿದ್ದಾರೆ. ಎಲ್ಲಾ ದೇಶಗಳಿಗೆ ಜಿಂದಾಬಾದ್ ಹೇಳುತ್ತಿದ್ದಳು. ಆದರೆ ಹೇಳಲು ಬಿಟ್ಟಿಲ್ಲ. ಹಿಂದೂಸ್ತಾನ್‌ ಜಿಂದಾಬಾದ್ ಎಂದು ಕೂಡಾ ಹೇಳಿದ್ದಾಳೆ. ಅಮೂಲ್ಯ ಪ್ರತಿಭಾವಂತ ಯುವತಿಯಾಗಿದ್ದು,  ವೇದಿಕೆಯಲ್ಲಿದ್ದ ಮುಸ್ಲಿಂ ಮುಖಂಡರು ಹೆದರಿಕೊಂಡು ಮಾತನಾಡಲು ಅವಕಾಶ ಕೊಟ್ಟಿಲ್ಲ’ ಎಂದು ಹೇಳಿದರು.

ನಗರದ ಟಿಪ್ಪು ಸುಲ್ತಾನ್‌ ಉದ್ಯಾನದಲ್ಲಿ ಜನವರಿ 26 ರಿಂದ ಸಂವಿಧಾನ ಹಕ್ಕುಗಳ ರಕ್ಷಣಾ ವೇದಿಕೆಯಿಂದ ಅನಿರ್ದಿಷ್ಟಾವಧಿ ಧರಣಿ ನಡೆಯುತ್ತಿದ್ದು, ಶಿವರಾತ್ರಿ ನಿಮಿತ್ತ ಏರ್ಪಡಿಸಿದ್ದ ಸರ್ವಜನಾಂಗದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)