ಭಾನುವಾರ, ಆಗಸ್ಟ್ 25, 2019
24 °C

ಜನ್ಮದಿನದ ಹಾರ್ದಿಕ ಶುಭಾಶಯಗಳು ಅಮ್ಮಾ: ಅನುಷ್ಕಾ ಕನ್ನಡಕ್ಕೆ ಮನಸೋತ ಕನ್ನಡಿಗರು

Published:
Updated:

ಬೆಂಗಳೂರು: ನಟಿ ಅನುಷ್ಕಾ ಶೆಟ್ಟಿ ತಾಯಿಗೆ ಹುಟ್ಟುಹಬ್ಬದ ಶುಭಾಶಯ ಹೇಳಲು ಮಾಡಿರುವ ಪೋಸ್ಟ್‌ ಕನ್ನಡಿಗರ ಮನಸ್ಸು ಗೆದ್ದಿದೆ. ಅದೇನು ಅಂತಹ ಟ್ವೀಟ್‌ ಎಂದು ಯೋಚಿಸುತ್ತಿದ್ದೀರಾ?

ಅನುಷ್ಕಾ ಶೆಟ್ಟಿ ಕನ್ನಡತಿ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅಂದಹಾಗೆ ಅನುಷ್ಕಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡದಲ್ಲಿ ಶುಭಾಶಯ ತಿಳಿಸಿದ್ದಾರೆ. 

 

‘ಜನ್ಮದಿನದ ಹಾರ್ದಿಕ ಶುಭಾಶಯಗಳು ಅಮ್ಮಾ’ ಎಂದು ಶುಭಾಶಯ ತಿಳಿಸಿದ್ದಕ್ಕೆ ಕನ್ನಡಿಗರು ಮನಸೋತಿದ್ದಾರೆ. ಜೊತೆಗೆ ಅವರ ಕನ್ನಡ ಪ್ರೀತಿಯನ್ನು ಹಾಡಿ–ಹೊಗಳಿದ್ದಾರೆ. ಕರ್ನಾಟಕದವರಾಗಿದ್ದರೂ ಪರಭಾಷೆಯ ಮೂಲಕ ಅನುಷ್ಕಾ ಸಿನಿಮಾಲೋಕಕ್ಕೆ ಕಾಲಿಟ್ಟಿದ್ದರು. ಹೀಗಿದ್ದೂ ಕನ್ನಡ ಇಂಪನ್ನು ಮರೆತಿಲ್ಲ ಅಭಿಮಾನಿಗಳ ಖುಷಿಗೆ ಕಾರಣವಾಗಿದೆ.

ಸೂಕ್ತ ಕಥೆ ಸಿಕ್ಕಿದರೆ ಕನ್ನಡದಲ್ಲೂ ಅಭಿನಯಿಸುತ್ತೇನೆ ಎಂದಿರುವ ಅನುಷ್ಕಾ ಅವರ ಕನ್ನಡ ಸಿನಿಮಾ ಕನಸು ಇನ್ನೂ ನನಸಾಗಿಲ್ಲ. ಆದರೂ ಕನ್ನಡ ಭಾಷೆಯ ಮೇಲಿನ ಪ್ರೀತಿಯನ್ನು ಅವರು ಮರೆತಿಲ್ಲ ಎನ್ನುವುದಕ್ಕೆ ಅವರ ಪೋಸ್ಟ್‌ ನಿದರ್ಶನ ಎನ್ನುವುದು ನೆಟ್ಟಿಗರ ಅಭಿಪ್ರಾಯ.

ಅನುಷ್ಕಾ ಉದಾಹರಣೆಯನ್ನು ಇಟ್ಟುಕೊಂಡು ‘ಕನ್ನಡ ಕಷ್ಟ’ ಎಂದು ವಿವಾದಕ್ಕೀಡಾಗಿದ್ದ ರಶ್ಮಿಕಾ ಮಂದಣ್ಣ ವಿರುದ್ಧ ಕನ್ನಡಿಗರು ಹರಿಹಾಯ್ದಿದ್ದಾರೆ. ‘ಕನ್ನಡದಿಂದ ಹೋಗಿ ತೆಲುಗಿನಲ್ಲಿ ಸಕ್ಸಸ್ ಕಂಡು ಹಲವು ವರ್ಷಗಳಾದರೂ ಮಾತೃ ಭಾಷೆಯ ಬಗೆಗಿನ ಅಭಿಮಾನ ಹೊಂದಿರೋ ನಮ್ ಅನುಷ್ಕಾನ ನೋಡಿದ ಮೇಲಾದರೂ ಒಂದ್ ಚೂರಾದ್ರೂ ಸಂಸ್ಕಾರ ಕಲಿಯಿರಿ’ ಎಂಬ ಟೀಕೆಗಳನ್ನು ನೆಟ್ಟಿಗರು ಮಾಡಿದ್ದಾರೆ.

Post Comments (+)