ಗುರುವಾರ , ಏಪ್ರಿಲ್ 9, 2020
19 °C

ಮುದ್ರೆ ಇರುವವರು ಸಾರ್ವಜನಿಕವಾಗಿ ಕಂಡರೆ ತಿಳಿಸಿ: ಭಾಸ್ಕರ್‌ ರಾವ್‌ ಟ್ವೀಟ್‌ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹೋಮ್‌ ಕ್ವಾರಂಟೈನ್‌ಗೆ (ನಿವಾಸದಲ್ಲೇ ಪ್ರತ್ಯೇಕವಾಸ) ಸೂಚಿಸಿ ಕೈ ಮೇಲೆ ಮುದ್ರೆ ಹಾಕಲಾಗಿರುವ ವ್ಯಕ್ತಿಗಳು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌ ಭಾಸ್ಕರ್‌ ರಾವ್‌, ಅಂಥವರು ಕಂಡರೆ ಪೊಲೀಸರಿಗೆ ತಿಳಿಸಿ ಎಂದು ಜನರಲ್ಲಿ ಮನವಿ ಮಾಡಿದ್ದಾರೆ. 

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ‘5000 ಮಂದಿಗೆ ಹೋಮ್‌ ಕ್ವಾರಂಟೈನ್‌ಗೆ ಸೂಚಿಸಿ, ಅವರ ಕೈಗಳ ಮೇಲೆ ಮುದ್ರೆ ಹಾಕಲಾಗಿದೆ. ಸಾರ್ವಜನಿಕರ ಹಿತದ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಆದರೆ, ಹೋಮ್ ಕ್ವಾರಂಟೈನ್‌ಗೆ ಸೂಚಿಸಲಾಗಿರುವ ವ್ಯಕ್ತಿಗಳು ಬಿಎಂಟಿಸಿ ಬಸ್‌ಗಳಲ್ಲಿ ಓಡಾಡುತ್ತಿರುವುದು ಮತ್ತು ರೆಸ್ಟೋರೆಂಟ್‌ಗಳಲ್ಲಿ ಕುಳಿತಿರುವ ಬಗ್ಗೆ ನಮಗೆ ಕರೆಗಳು ಬಂದಿವೆ. ಇಂಥವರು ಕಂಡರೆ ಸಹಾಯವಾಣಿ 100 ಕರೆ ಮಾಡಿ,’ ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. 

ಮಾಹಿತಿ ನೀಡಿದರೆ, ಅಂಥವರನ್ನು ಬಂಧಿಸಿ ಸರ್ಕಾರಿ ಕ್ವಾರಂಟೀನ್‌ಗಳಲ್ಲಿ ಇರಿಸುವುದಾಗಿಯೂ ಭಾಸ್ಕರ್‌ ರಾವ್‌ ಅವರು ಎಚ್ಚರಿಸಿದ್ದಾರೆ. 

ಭಾರತೀಯ ದಂಡ ಸಂಹಿತೆ 269ರ ಅಡಿಯಲ್ಲಿ ಅಂಥವರ ವಿರುದ್ಧ ಪ್ರಕರಣ ದಾಖಲಿಸುವುದಾಗಿಯೂ ಭಾಸ್ಕರ್‌ ರಾವ್‌ ಅವರು ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು