ಬುಧವಾರ, ನವೆಂಬರ್ 13, 2019
24 °C

‘ಯತ್ನಾಳ ಬರೀ ಬೋಗಸ್‌ ಶಾಸಕ’

Published:
Updated:

ವಿಜಯಪುರ: ‘ಬಸನಗೌಡ ಪಾಟೀಲ ಯತ್ನಾಳ ಒಬ್ಬ ಬಿಲ್ಡಪ್‌ ಆಂಡ್‌ ಬೋಗಸ್‌ ಶಾಸಕ’ ಎಂದು ಸ್ವಪಕ್ಷೀಯ ಮುಖಂಡ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಕಿಡಿಕಾರಿದರು.

ಮಹಾರಾಷ್ಟ್ರ ಚುನಾವಣೆ ಫಲಿ ತಾಂಶ ಕುರಿತು ಶಾಸಕ ಯತ್ನಾಳ ಹೇಳಿಕೆ ಕುರಿತು ಕೇಳಲಾದ ಪ್ರಶ್ನೆಗೆ ಭಾನುವಾರ ಪ್ರತಿಕ್ರಿಯಿಸಿದ ಅವರು, ‘ಪಕ್ಷ ವಹಿಸಿದ್ದ ಜವಾಬ್ದಾರಿ  ನಿರ್ವಹಿಸಿದ್ದೇವೆ. 30 ಸಾವಿರ ಮತಗಳಿಂದ ಸೋತವರಿಗೆ ಸ್ಟಾರ್ ಪ್ರಚಾರಕರನ್ನಾಗಿ ಮಾಡಿದ್ದಾರೆ ಎನ್ನುವುದು ಸರಿಯಲ್ಲ’ ಎಂದರು.

‘ಸಂದರ್ಭ ಬಂದಂತೆ ಹೊರಳಾ ಡೋದು ಅವರ ರಾಜಕಾರಣ. ಪಕ್ಷ ತಾಯಿ ಅಂತಾರೆ, ಪಕ್ಷದ ನಾಯಕರಿಗೆ ಬೈತಾರೆ. ಶೋಕಾಸ್‌ ನೋಟಿಸ್‌ಗೆ ಉತ್ತರ ಕೊಡುವುದಿಲ್ಲ ಎನ್ನುತ್ತಾರೆ. ಹೈಕಮಾಂಡ್‌ಗೆ ಹೆದರಲ್ಲ ಅನ್ನುವುದಾದರೆ ಮತ್ತೇಕೆ ಉತ್ತರ ಕೊಟ್ಟರು’ ಅಂದರು.

ಪ್ರತಿಕ್ರಿಯಿಸಿ (+)