ಶನಿವಾರ, ಮಾರ್ಚ್ 6, 2021
28 °C

ಗೋವಾ, ಗುಜರಾತ್ ರಾಜ್ಯಕ್ಕೆ ನೋಡಲ್‌ ಅಧಿಕಾರಿಗಳ ನೇಮಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗೋವಾ ಮತ್ತು ಗುಜರಾತ್‌ ರಾಜ್ಯಗಳ ನೋಡಲ್‌ ಅಧಿಕಾರಿಗಳ ಜೊತೆ ಸಮನ್ವಯ ಸಾಧಿಸಲು ನೋಡಲ್‌ ಅಧಿಕಾರಿಗಳನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈಗಾಗಲೇ ಮಹಾರಾಷ್ಟ್ರಕ್ಕೆ ನೋಡಲ್‌ ಅಧಿಕಾರಿಗಳಾಗಿ ನೇಮಿಸಿದ್ದ ಐಎಎಸ್‌ ಅಧಿಕಾರಿ ಗುಂಜನ್‌ ಕೃಷ್ಣ (9036366666) ಮತ್ತು ಐಪಿಎಸ್‌ ಅಧಿಕಾರಿ ಪಾಟೀಲ ವಿನಾಯಕ ವಸಂತರಾವ್‌ (9480800823) ಅವರಿಗೆ ಗೋವಾ ರಾಜ್ಯದ ಹೊಣೆಯನ್ನೂ ನೀಡಲಾಗಿದೆ.

ರಾಜಸ್ಥಾನದ ಹೊಣೆಗಾರಿಕೆ ನೀಡಿದ್ದ ಐಎಎಸ್‌ ಅಧಿಕಾರಿ ಮನೋಜ್‌ ಕುಮಾರ್‌  ಮೀನಾ (9448724992) ಮತ್ತು ಐಪಿಎಸ್‌ ಅಧಿಕಾರಿ ರಾಮನಿವಾಸ್‌ ಸೆಪಟ್‌ (9606041140) ಅವರನ್ನು ಗುಜರಾತ್‌ ರಾಜ್ಯಕ್ಕೂ ನೋಡಲ್‌ ಅಧಿಕಾರಿಗಳಾಗಿ ನೇಮಿಸಲಾಗಿದೆ.

ಈ ರಾಜ್ಯಗಳಿಗೆ ತೆರಳುವವರಿಗೆ ಈ ಅಧಿಕಾರಿಗಳು ನೆರವಾಗಲಿದ್ದಾರೆ. ಸಾರಿಗೆ ಸಂಸ್ಥೆಗಳ ಅಧಿಕಾರಿಗಳು ಮತ್ತು ಇತರ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಈ ಅಧಿಕಾರಿಗಳಿಗೆ ಅಗತ್ಯ ಮಾಹಿತಿ ನೀಡುವಂತೆ ಕೂಡಾ ಆದೇಶದಲ್ಲಿ ತಿಳಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು