ರಾಷ್ಟ್ರಗೀತೆಗೆ ಅಗೌರವ; ಬಂಧನ, ಬಿಡುಗಡೆ

ಸೋಮವಾರ, ಮೇ 27, 2019
28 °C

ರಾಷ್ಟ್ರಗೀತೆಗೆ ಅಗೌರವ; ಬಂಧನ, ಬಿಡುಗಡೆ

Published:
Updated:

ಬೆಂಗಳೂರು: ರಾಷ್ಟ್ರಗೀತೆಗೆ ಅಗೌರವ ತೋರಿದ ಆರೋಪದಡಿ ಖಾಸಗಿ ಕಂಪನಿ ಉದ್ಯೋಗಿ ಜಿತಿನ್ ಎಂಬಾತನನ್ನು ಬಂಧಿಸಿದ ಅಶೋಕನಗರ ಪೊಲೀಸರು, ನಂತರ ಠಾಣಾ ಜಾಮೀನಿನ ಮೇಲೆ ಬಿಟ್ಟು ಕಳುಹಿಸಿದ್ದಾರೆ.

ಸಂಜಯನಗರ ಸಮೀಪದ ಜಲದರ್ಶಿನಿ ಲೇಔಟ್ ನಿವಾಸಿಯಾದ ಜಿತಿನ್, ಮಂಗಳವಾರ ಸಂಜೆ 5.30ರ ಸುಮಾರಿಗೆ ‘ಅವೆಂಜರ್ಸ್‌ ಎಂಡ್ ಗೇಮ್’ ಸಿನಿಮಾ ನೋಡಲು ಗರುಡಾ ಮಾಲ್‌ಗೆ ಹೋಗಿದ್ದ. ಚಿತ್ರ ಪ್ರದರ್ಶನಕ್ಕೂ ಮುನ್ನ ರಾಷ್ಟ್ರಗೀತೆ ಶುರುವಾದರೂ, ಆತ ಸೀಟು ಬಿಟ್ಟು ಮೇಲೆ ಎದ್ದಿರಲಿಲ್ಲ. ಈ ವರ್ತನೆಯನ್ನು ಪ್ರಶ್ನಿಸಿದ ಪ್ರೇಕ್ಷಕರೊಂದಿಗೂ ಗಲಾಟೆ ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿ ಜಿತಿನ್‌ ವಿರುದ್ಧ ದೂರವಾಣಿನಗರದ ಎಸ್.ಸುಮನ್ ಕುಮಾರ್ ಎಂಬುವರು ದೂರು ಕೊಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !