ಮಂಗಳವಾರ, ಜನವರಿ 28, 2020
22 °C

ಶ್ರೀಗಂಧ ಕಳ್ಳರಿಂದ ಹಲ್ಲೆ ಅರಣ್ಯಾಧಿಕಾರಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸನಗರ: ತಾಲ್ಲೂಕಿನ ಹೆಗ್ಗರಸು ಗ್ರಾಮದಲ್ಲಿ ಬುಧವಾರ ರಾತ್ರಿ ಅರಣ್ಯಾಧಿಕಾರಿ ಮತ್ತು ಸಿಬ್ಬಂದಿ ಮೇಲೆ ಶ್ರೀಗಂಧ ಕಳ್ಳರು ಗಂಧದ ತುಂಡು ಹಾಗೂ ಮಚ್ಚಿನಿಂದ ದಾಳಿ ನಡೆಸಿದ್ದು, ಡಿಆರ್‌ಎಫ್‌ಒ (ಉಪ ವಲಯ ಅರಣ್ಯಾಧಿಕಾರಿ) ಗೋವಿಂದರಾಜ್ ಅವರ ತಲೆ ಹಾಗೂ ಎದೆಗೆ ತೀವ್ರ ಪೆಟ್ಟು ಬಿದ್ದಿದೆ.

ಹೆಗ್ಗರಸು ಗ್ರಾಮದ ಮೋಹನ ಮತ್ತು ಕುಮಾರ್ ಸೇರಿದಂತೆ ಐವರ ತಂಡ ಹಲ್ಲೆ ಮಾಡಿದೆ. ಗೋವಿಂದರಾಜ್ ಅವರು ಹೊಸನಗರ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿಗಳು ಪರಾರಿಯಾಗಿದ್ದು ಪತ್ತೆಗಾಗಿ ಕಾರ್ಯಾಚರಣೆ ಆರಂಭವಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು