ಆಟಿಸಂ: ವೈಕಲ್ಯವಲ್ಲ, ವಿಶೇಷ ಸಾಮರ್ಥ್ಯ

ಶನಿವಾರ, ಏಪ್ರಿಲ್ 20, 2019
29 °C

ಆಟಿಸಂ: ವೈಕಲ್ಯವಲ್ಲ, ವಿಶೇಷ ಸಾಮರ್ಥ್ಯ

Published:
Updated:
Prajavani

ವಿಶ್ವ ಆಟಿಸಂ ಜಾಗೃತಿ ಮಾಸದ ಪ್ರಯುಕ್ತ ಕೋರಮಂಗಲದ ಫೋರಂ ಮಾಲ್‌ನಲ್ಲಿ ಐ ಸಪೋರ್ಟ್ ಫೌಂಡೇಷನ್ ಏಪ್ರಿಲ್ 2 ಮತ್ತು 13ರಂದು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದೆ. 

ಓರಾಕಲ್, ಅಲ್ಟ್‌ಲ್ಯಾಬ್ ಇನ್ನೊವೇಟರ್ಸ್‌, ಕಲರ್‌ಥಾನ್ ಮತ್ತು ಜಿಗ್ಗಲ್ಸ್‌ ಆಟಿಸಂ ಜಾಗೃತಿ ಕಾರ್ಯಕ್ರಮಕ್ಕೆ ಸಹಯೋಗ ನೀಡಲಿವೆ. ಏಪ್ರಿಲ್ 2ರಂದು ಬೆಳಿಗ್ಗೆ 11ರಿಂದ 12ರವರೆಗೆ ಸ್ತಬ್ಧಕಾಲ (quiet hour) ಕಾರ್ಯಕ್ರಮಗಳು ನಡೆಯಲಿವೆ. ಈ ಅವಧಿಯಲ್ಲಿ ಫೋರಂ ಮಾಲ್ ನ ಸಿಬ್ಬಂದಿ 20 ವಿಶೇಷ ಮಕ್ಕಳನ್ನು ಮಾಲ್‌ನೊಳಗೆ ಅಡ್ಡಾಡಿಸಿ ಶಾಪಿಂಗ್ ಅನುಭವ ಸವಿಯಲು ಅವಕಾಶ ಮಾಡಿಕೊಡಲಿದ್ದಾರೆ. 

ಈ ಸಮಯದಲ್ಲಿ ಮಾಲ್‌ನೊಳಗೆ ಪ್ರಖರ ಬೆಳಕು ಮತ್ತು ಜೋರಾದ ಧ್ವನಿವರ್ಧಕಗಳನ್ನು ಬಳಸುವುದಿಲ್ಲ. ಆಟಿಸಂ ಮಕ್ಕಳ ಶಾಪಿಂಗ್‌ಗೆ ಅನುಕೂಲವಾಗಲೆಂದು ಈ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ. ಈ ಸಮಯದಲ್ಲಿ ಮಾಲ್‌ನ ಸಿಬ್ಬಂದಿ ರಿಬ್ಬನ್ ಕಟ್ಟಿಕೊಂಡು ತಮ್ಮ ಕೆಲಸ ನಿರ್ವಹಿಸುವ ಮೂಲಕ ಆಟಿಸಂ ಕುರಿತು ಜಾಗೃತಿ ಮೂಡಿಸಲಿದ್ದಾರೆ. 

ಏಪ್ರಿಲ್ 13ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ  ಆಟಿಸಂ ಫೆಸ್ಟ್‌ನಲ್ಲಿ ಆಟಿಸಂ ಕುರಿತು ಸಮುದಾಯದಲ್ಲಿ ಜಾಗೃತಿ ಮೂಡಿಸುವುದು, ಆಟಿಸಂ ಪೀಡಿತರನ್ನು ಸಾಮಾಜಿಕವಾಗಿ ಒಳಗೊಳ್ಳುವುದು, ಅವರಿಗೆ ವಿದ್ಯಾಭ್ಯಾಸ, ಕೌಶಲ, ಕುಟುಂಬದಲ್ಲಿ ಆಟಿಂಸವುಳ್ಳ ಮಕ್ಕಳನ್ನು ನೋಡಿಕೊಳ್ಳುವ ಬಗ್ಗೆ ತಿಳಿವಳಿಕೆ ನೀಡಲಾಗುವುದು. ಆಟಿಸಂ ಫೆಸ್ಟ್‌ನಲ್ಲಿ ಮಕ್ಕಳಿಗಾಗಿ ಆಟೋಪಕರಣಗಳು, ಒಳಾಂಗಣ ಆಟಗಳನ್ನು ಆಯೋಜಿಸಲಾಗಿದೆ. ಆಟಿಸಂ ಮಕ್ಕಳಿಗಾಗಿ ಮ್ಯಾಜಿಕ್ ಷೋ, ಚಿತ್ರಕಲೆ, ಕ್ಯಾರಿಕೇಚರ್, ಕಾರ್ಟೂನ್ ಕ್ಯಾರೆಕ್ಟರ್, ಸಂಗೀತ ಕಾರ್ಯಕ್ರಮಗಳನ್ನೂ ನಡೆಸಲಾಗುವುದು. 

ಆಟಿಸಂ ಬಗ್ಗೆ ಒಂದಿಷ್ಟು...
ನರಗಳ ಸಮಸ್ಯೆ ಹೊಂದಿರುವ ಮಕ್ಕಳು ಬಾಲ್ಯದಲ್ಲೇ ಆಟಿಸಂಗೆ (ಸ್ವಲೀನತೆ) ಒಳಗಾಗುತ್ತಾರೆ. ತನ್ನಲ್ಲಿ ತಾನು, ತನ್ನಷ್ಟಕ್ಕೆ ಮಗ್ನವಾಗುವುದು. ಯಾವುದರ ಪರಿವೆ ಇರದಿರುವುದು. ತುಂಟತನ, ಕೋಪ, ಮಾಡಿದ್ದನ್ನೇ ಮಾಡುವುದು ಇವು ಆಟಿಸಂನ ಲಕ್ಷಣಗಳು. ಸಂಶೋಧನೆಗಳ ಪ್ರಕಾರ, ಅನುವಂಶೀಯತೆ, ರಕ್ತ ಸಂಬಂಧದ ಮದುವೆ, ಹೆಣ್ಣುಮಕ್ಕಳಿಗೆ ಚಿಕ್ಕವಯಸ್ಸಿನಲ್ಲಿ ಮದುವೆ, ಬೇಗ ಗರ್ಭ ಧರಿಸುವುದು, ಹೆರಿಗೆ ಸಮಯದಲ್ಲಿ ತೊಂದರೆ, ತೂಕ ಕಡಿಮೆ ಇರುವುದರಿಂದ, ಅವಳಿ, ತ್ರಿವಳಿಗಳ ಗರ್ಭವತಿಯಾಗುವುದರಿಂದ ಕೂಡ ಆಟಿಸಂ ತೊಂದರೆಗೆ ಕಾರಣವಾಗಬಹುದು. ಅಲ್ಪ ಪ್ರಮಾಣದ ಆಟಿಸಂನಲ್ಲಿ ಸ್ಪಷ್ಟ ಮಾತಿನ ಕೌಶಲದ ಕೊರತೆ ಇರುತ್ತದೆ. ಮಾತು ಮತ್ತು ವರ್ತನೆಗಳಲ್ಲಿ ಪರಸ್ಪರ ಪ್ರತಿಕ್ರಿಯೆಯ ತೊಂದರೆಗಳನ್ನು ಕಾಣಬಹುದು. ಕೇಳಿದ ಪ್ರಶ್ನೆಗಳಿಗೆ ತಕ್ಷಣ ಉತ್ತರ ಕೊಡುವುದಿಲ್ಲ. ಜೋರಾದ ಶಬ್ದ, ಅತಿ ಬೆಳಕಿನ ಕಿರಣಗಳಿಗೆ ಹೊಂದಿಕೊಳ್ಳಲು ತೊಂದರೆಯನ್ನು ಅನುಭವಿಸುತ್ತಾರೆ.

ತೀವ್ರತರನಾದ ಆಟಿಸಂ ಬಗ್ಗೆ ತಿಳಿಯುವುದಾದರೆ, ಇವರಲ್ಲಿ ಮಾತಿನ ತೊಂದರೆ, ಕನಿಷ್ಠ ಶಬ್ದಗಳ ಉಚ್ಛಾರವೂ ಇರುವುದಿಲ್ಲ. ಬೌದ್ಧಿಕ ಮಟ್ಟವೂ ಅಲ್ಪಪ್ರಮಾಣದ್ದಾಗಿರುತ್ತದೆ. ಮುಖಕೊಟ್ಟು ಮಾತನಾಡುವುದಿಲ್ಲ. ಕಾರಣವಿಲ್ಲದ ನಗು, ಅಳು, ನೋವು ನಲಿವು, ನಾಲಿಗೆಯ ಸ್ವಾದ ಇರುವುದಿಲ್ಲ. ಸಂಬಂಧಗಳಿಗೆ ಸ್ಪಂದಿಸುವುದಿಲ್ಲ. ವಸ್ತುಗಳಿಗೆ ಕಿತ್ತಾಡುವುದು ಕಂಡುಬರುತ್ತದೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !