ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತ ಎಂಬ ಕಾರಣಕ್ಕೆ ಹಟ್ಟಿ ಪ್ರವೇಶಕ್ಕೆ ಸಂಸದರಿಗೆ ಅಡ್ಡಿ

ಲೋಕಸಭಾ ಸದಸ್ಯರನ್ನು ಹಟ್ಟಿಯೊಳಗೆ ಬಿಡದ ಗ್ರಾಮಸ್ಥರು
Last Updated 17 ಸೆಪ್ಟೆಂಬರ್ 2019, 17:15 IST
ಅಕ್ಷರ ಗಾತ್ರ

ಪಾವಗಡ: ತಾಲ್ಲೂಕಿನ ಪೆಮ್ಮನಹಳ್ಳಿ ಗೊಲ್ಲರಹಟ್ಟಿಯಲ್ಲಿ ಸೋಮವಾರ ದಲಿತ ಸಮುದಾಯದವರು ಎಂಬ ಕಾರಣಕ್ಕೆ ಲೋಕಸಭಾ ಸದಸ್ಯ ಎ.ನಾರಾಯಣಸ್ವಾಮಿ ಅವರನ್ನು ಹಟ್ಟಿಗೆ ಬಾರದಂತೆ ಗ್ರಾಮಸ್ಥರು ತಡೆದರು.

ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನು (ಸಿಎಸ್‌ಆರ್‌) ಬಳಸಿ ಹಟ್ಟಿಯಲ್ಲಿ ಮನೆಗಳನ್ನು ನಿರ್ಮಿಸಿಕೊಟ್ಟು ಮೂಲ ಸೌಕರ್ಯ ಕಲ್ಪಿಸಲು ಸಂಸದ ಎ.ನಾರಾಯಣಸ್ವಾಮಿ ಕಂಪನಿಗಳ ಪ್ರತಿನಿಧಿಗಳನ್ನು ಗ್ರಾಮಕ್ಕೆ ಕರೆ ತಂದಿದ್ದರು.

ವಿಚಾರ ತಿಳಿದ ಗ್ರಾಮಸ್ಥರು ಹಟ್ಟಿಯೊಳಕ್ಕೆ ತಾವು ಬರಬಾರದು, ದಯಮಾಡಿ ಸಹಕರಿಸಿ ಎಂದು ಹಟ್ಟಿಯ ಪ್ರವೇಶ ಮಾಡುವ ಸ್ಥಳದಲ್ಲಿ ಸಂಸದರಿಗೆ ಆಸನದ ವ್ಯವಸ್ಥೆ ಮಾಡಿದರು. ಇತರ ಮುಖಂಡರನ್ನು ಹಟ್ಟಿಯೊಳಕ್ಕೆ ಬರಮಾಡಿಕೊಂಡರು.

ಬಿಜೆಪಿ ಪಕ್ಷದ ಮುಖಂಡರು ಸೇರಿದಂತೆ ಹಲವರು ಗ್ರಾಮಸ್ಥರ ಮನವೊಲಿಸಲು ಯತ್ನಿಸಿದರು. ‘ಇನ್ನೂ ಯಾವ ಕಾಲದಲ್ಲಿದ್ದೀರಿ, ಅವರು ಹಟ್ಟಿಯ ಅಭಿವೃದ್ಧಿಗಾಗಿ ಬಂದಿದ್ದಾರೆ. ಗುಡಿಸಲು ಮುಕ್ತವಾಗಿಸಿ ಹಟ್ಟಿಗೆ ಮೂಲ ಸೌಕರ್ಯ ಕಲ್ಪಿಸಲು ಬಂದಿರುವ ಅವರಿಗೆ ಒಳಗೆ ಬರಲು ಅವಕಾಶ ಮಾಡಿಕೊಡಿ’ ಎಂದರು.

ಎ.ನಾರಾಯಣಸ್ವಾಮಿ ಅವರೂ ಸಹಕರಿಸುವಂತೆ ಕೋರಿದರು. ಆದರೆ, ಇದ್ಯಾವುದಕ್ಕೂ ಮಣಿಯದ ಗ್ರಾಮದ ಕೆಲ ಯುವಕರು, ಮುಖಂಡರು ಪಟ್ಟು ಬಿಡಲಿಲ್ಲ. ಕೊನೆಗೆ ಅಲ್ಲಿಂದ ನಾರಾಯಣಸ್ವಾಮಿ ಹಿಂದಿರುಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT