ನವದೆಹಲಿ: ‘ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥಗೆ ಅವರು ಹಾಕಿದ್ದ ಚಪ್ಪಲಿಯಿಂದಲೇ ಮುಖಕ್ಕೆ ಹೊಡೆಯಬೇಕು ಎಂದೆನಿಸಿತ್ತು’ ಎಂದು ಶಿವಸೇನಾ ಮುಖ್ಯಸ್ಥ ಉದ್ದವ್ ಠಾಕ್ರೆ ಕಿಡಿ ಕಾರಿದ್ದಾರೆ.

ಯೋಗಿ ಆದಿತ್ಯನಾಥ ಅವರು ಪಲ್ಗಾರ್ಗೆ ಭೇಟಿ ನೀಡಿದ್ದ ವೇಳೆ ಮರಾಠ ಸಾಮ್ರಾಜ್ಯಪತಿ ಛತ್ರಪತಿ ಶಿವಾಜಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವಾಗ ಚಪ್ಪಲಿ ಧರಿಸಿದ್ದರು ಎಂಬ ಕಾರಣಕ್ಕೆ ಠಾಕ್ರೆ ಈ ಹೇಳಿಕೆ ನೀಡಿದ್ದಾರೆ.

ಆದಿತ್ಯನಾಥ ಅವರು ಚಪ್ಪಲಿ ಹಾಕಿರುವುದನ್ನು ಕಂಡು ಅದೇ ಚಪ್ಪಲಿಯಿಂದ ಹೊಡೆಯಬೇಕು ಎಂದೆನಿಸಿತ್ತು. ಆದಿತ್ಯನಾಥ ಒಬ್ಬ ಆಷಾಢಭೂತಿ ಮುಖ್ಯಮಂತ್ರಿ. ಆತ ಯೋಗಿ ಅಲ್ಲ. ಅವನೊಬ್ಬ ಭೋಗಿ. ಯೋಗಿಯಾದವರು ಎಲ್ಲವನ್ನು ತ್ಯಜಿಸಿ ಗುಹೆಯಲ್ಲಿ ಕುಳಿತುಕೊಳ್ಳಬೇಕು. ಆದರೆ ಇವನು ಮುಖ್ಯಮಂತ್ರಿ ಗಾದಿಯಲ್ಲಿ ಕುಳಿತಿದ್ದಾನೆ ಎಂದು ಏಕವಚದಲ್ಲಿ ನಿಂದಿಸಿದ್ದಾರೆ.

2019ರಲ್ಲಿ ನಡೆಯಲಿರುವ ಲೋಕಸಭೆ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿಯೇ ಸ್ಪರ್ಧಿಸಲು ಶಿವಸೇನಾ ನಿರ್ಧರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.