‘ಎಲ್ಲವನ್ನೂ ಪುಕ್ಕಟೆ ಕೊಟ್ಟ ಸಿದ್ದರಾಮಯ್ಯ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂತೇ...’

7
ಶಾಸಕ ಬಸವರಾಜ ಹೊರಟ್ಟಿ ಪ್ರಶ್ನೆ

‘ಎಲ್ಲವನ್ನೂ ಪುಕ್ಕಟೆ ಕೊಟ್ಟ ಸಿದ್ದರಾಮಯ್ಯ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂತೇ...’

Published:
Updated:

ಕುಮಟಾ: ‘ಯಾರೂ ದುಡಿಬ್ಯಾಡ್ರಿ. ಎಲ್ಲರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ ಮಾಡ್ರಿ ಅಂತಾರೆ ಕಾಂಗ್ರೆಸ್‌ನವರು. ಎಲ್ಲವನ್ನೂ ಪುಕ್ಕಟೆ ಕೊಟ್ಟ ಸಿದ್ದರಾಮಯ್ಯ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂತೇ...’ ಹೀಗೆಂದು ಪ್ರಶ್ನೆ ಇಟ್ಟವರು ಶಾಸಕ ಬಸವರಾಜ ಹೊರಟ್ಟಿ.

ಗುರುವಾರ ಇಲ್ಲಿ ಮಾತನಾಡಿದ ಅವರು, ‘ದುಡಿದವರಿಗೆ ಕೂಲಿ ಕೊಡುವುದು ಸರಿ. ಮನೆಯಲ್ಲಿ ಕೂತವರಿಗೆ ಪುಕ್ಕಟೆ ಎಲ್ಲವನ್ನೂ ಕೊಡುವುದು ಎಷ್ಟು ಸರಿ? ಪುಕ್ಕಟೆ ಕೊಡುವ ಯೋಜನೆಯನ್ನು ರದ್ದು ಮಾಡಲು ಹಿಂದೆಯೇ ಸಿದ್ದರಾಮಯ್ಯ ಅವರಿಗೆ ಸಲಹೆ ಮಾಡಿದ್ದೆ’ ಎಂದರು.

‘ಚುನಾವಣೆ ಸಂದರ್ಭದಲ್ಲಿ ಬಿಜೆಪಿಯವರು ಹಣ, ಹೆಂಡ ಎಲ್ಲ ಕೊಡ್ತಾರೆ. ಕಾಂಗ್ರೆಸ್, ಜೆಡಿಎಸ್‌ನವರೂ ಏನೇನೋ ಕೊಡ್ತಾರೆ. ಆದರೆ ಓಟು ಬೀಳುವುದಿಲ್ಲ’ ಎಂದರು.

ಬರಹ ಇಷ್ಟವಾಯಿತೆ?

 • 39

  Happy
 • 9

  Amused
 • 2

  Sad
 • 1

  Frustrated
 • 5

  Angry

Comments:

0 comments

Write the first review for this !