ಶನಿವಾರ, ಆಗಸ್ಟ್ 24, 2019
27 °C

ಬಿಎಸ್‌ವೈ– ಬಿ.ಸಿ.ಪಾಟೀಲ ಚರ್ಚೆ

Published:
Updated:

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಹಿರೇಕೆರೂರು ಕ್ಷೇತ್ರದ ಕಾಂಗ್ರೆಸ್‌ನ ಅನರ್ಹ ಶಾಸಕ ಬಿ.ಸಿ.ಪಾಟೀಲ ಭಾನುವಾರ ಭೇಟಿಯಾಗಿ ಚರ್ಚಿಸಿದರು.

ತಮ್ಮ ಪುತ್ರಿ ಸೃಷ್ಟಿ ಪಾಟೀಲ ಅವರನ್ನೂ ಜತೆಯಲ್ಲಿ ಕರೆತಂದಿದ್ದರು. 

ವಿಧಾನಸಭೆ ಉಪಚುನಾವಣೆ ಎದುರಾಗಿ, ಅಷ್ಟರಲ್ಲಿ ಕೋರ್ಟ್‌ನಲ್ಲಿ ಅನರ್ಹತೆ ವಿಚಾರ ನಿರ್ಧಾರ ಆಗದಿದ್ದರೆ ಏನು ಮಾಡಬೇಕು ಎಂಬ ಬಗ್ಗೆ ಚರ್ಚಿಸಿದ್ದಾರೆ. ಅನಿವಾರ್ಯವಾಗಿ ಸ್ಪರ್ಧಿಸಲು ಸಾಧ್ಯವಾಗದಿದ್ದರೆ ಪುತ್ರಿ ಸೃಷ್ಟಿಗೆ ಅವಕಾಶ ನೀಡುವಂತೆ ಬೇಡಿಕೆ ಸಲ್ಲಿಸಿದರು ಎನ್ನಲಾಗಿದೆ.

Post Comments (+)