ಬಳ್ಳಾರಿ: ಆಯುಷ್ ಇಲಾಖೆ ವತಿಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಹೊಮಿಯೊಪತಿ ಔಷಧಿಗಳನ್ನು ಸಾರ್ವಜನಿಕರಿಗೆ ಮತ್ತು ಮಾಧ್ಯಮದವರಿಗೆ ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ಜಿಲ್ಲಾ ಆಯುಷ್ ಇಲಾಖೆ ಅಧಿಕಾರಿ ಡಾ.ವರಪ್ರಸಾದ್ ತಿಳಿಸಿದರು.

ಮಾತ್ರೆಗಳನ್ನು (ಅರ್ಸೆನಿಕ್ ಆಲ್ಬಂ) ಆರಂಭದಲ್ಲಿ ಮೊದಲು ಮೂರು ದಿನ ಬೆಳಿಗ್ಗೆ, ರಾತ್ರಿ ಮತ್ತು ನಂತರ ವಾರಕ್ಕೊಮ್ಮೆ ಔಷಧಿ ಸೇವಿಸಬೇಕು. ಐದು ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಅರ್ಧ ಮಾತ್ರೆಯನ್ನು ಮಾತ್ರ ಕೊಡಬೇಕು. ಇದರಿಂದ ಯಾವುದೇ ಅಡ್ಡ ಪರಿಣಾಮವಿಲ್ಲ. ಎಲ್ಲರೂ ಮಾತ್ರೆ ಸೇವಿಸಬಹುದು ಎಂದು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ನಗರದ ಕೆ.ಸಿ.ರಸ್ತೆಯಲ್ಲಿರುವ ಇಲಾಖೆಯ ಕಚೇರಿಯಲ್ಲಿ ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ಉಚಿತವಾಗಿ ಮಾತ್ರೆಗಳನ್ನು ವಿತರಿಸಲಾಗುವುದು. ಆಧಾರ್ ಕಾರ್ಡ್ನೊಂದಿಗೆ ಬರಬೇಕು. ಕೊರೊನಾ ಕುರಿತ ಜಾಗೃತಿಯ ಭಾಗವಾಗಿ ಜಾಗೃತಿ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಯುಷ್ ಮಂತ್ರಾಲಯದ ನಿರ್ದೇಶನದ ಮೇರೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಸೋಂಕು ತಡೆಗೆ ಸತ್ವಯುತ ಆಹಾರ ಸೇವನೆಯೊಂದಿಗೆ ವ್ಯಾದಿ ಮುಂದಿನ ಹಂತಕ್ಕೆ ತಲುಪದಂತೆ ತಡೆಗಟ್ಟುವ ಕ್ರಮಗಳನ್ನು ಅನುಸರಿಸಬೇಕು ಎಂದರು. ಇದೇ ವೇಳೆ ಅಧಿಕಾರಿಗಳು ಪತ್ರಕರ್ತರಿಗೆ ಮಾತ್ರೆಗಳನ್ನು ವಿತರಿಸಿದರು.

ಇಲಾಖೆಯ ಸಹಾಯಕ ಆಡಳಿತಾಧಿಕಾರಿ ಶರಣಬಸಪ್ಪ ಜಿನಗ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರಾಮಲಿಂಗಪ್ಪ ಬಿ.ಕೆ. ಆಯುಷ್ ವೈದ್ಯರಾದ ಡಾ.ಶಶಿಧರ ರಾಮದುರ್ಗ, ಡಾ.ಫಣೀಂದ್ರ ಆಯುಷ್, ಡಾ.ಜಿತೇಂದ್ರ, ಆಯುಷ್ ವೈದ್ಯ ವಿಜಯೇಂದ್ರಚಾರ್, ಡಾ.ರಾಘವೇಂದ್ರಚಾರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.