ಭಗವಾಧ್ವಜ ನಮ್ಮ ಗುರಿ, ಗುರು: ಅನಂತಕುಮಾರ ಹೆಗಡೆ

ಬುಧವಾರ, ಜೂನ್ 19, 2019
23 °C

ಭಗವಾಧ್ವಜ ನಮ್ಮ ಗುರಿ, ಗುರು: ಅನಂತಕುಮಾರ ಹೆಗಡೆ

Published:
Updated:
Prajavani

ಮುಂಡಗೋಡ (ಉತ್ತರ ಕನ್ನಡ): ‘ನಾವು ಹೊರಟಿರುವುದು ಯಾರನ್ನೋ ಗೆಲ್ಲಿಸಲಿಕ್ಕೆ ಅಲ್ಲ ಅಥವಾ ಕೇವಲ ಅಧಿಕಾರ ನಡೆಸುವುದಕ್ಕೂ ಅಲ್ಲ. ನಮ್ಮ ಗುರಿ ಅತ್ಯಂತ ಸ್ಪಷ್ಟವಾಗಿದೆ. ನಮ್ಮ ಎದುರು ಭಗವಾಧ್ವಜ ಯಾವತ್ತೂ ಹಾರಾಡಬೇಕು. ಅದಕ್ಕೆ ಜಗತ್ತು ಸಹ ಗೌರವ ಕೊಡಬೇಕು’ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿದರು.

ಇಲ್ಲಿ ಸೋಮವಾರ ನಡೆದ ‘ಅವಲೋಕನ’ ಸಭೆಯಲ್ಲಿ ಅವರು ಮಾತನಾಡಿದರು.

‘ಯಾರು ಏನೇ ಹೇಳಲಿ. ನಾವು ಸಂಘಟನೆ ಕಟ್ಟಿರುವುದೇ ಧರ್ಮ, ಸಂಸ್ಕೃತಿ ಉಳಿಯಲಿ ಎಂದು. ಲಕ್ಷಾಂತರ ಕಾರ್ಯಕರ್ತರು ಅದಕ್ಕಾಗಿಯೇ ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ. ನಮ್ಮ ಗುರಿ ಮತ್ತು ಗುರು ಭಗವಾಧ್ವಜ ಆಗಿದೆ’ ಎಂದು ಅಭಿಪ್ರಾಯಪಟ್ಟರು.

‘ದೇಶದ ಎಲ್ಲ ಕಡೆ ಮೋದಿ ಅಲೆ ಇದೆ. ಸಂಘಟನೆ ಗಟ್ಟಿಯಾಗದ ಹೊರತು ಈ ಅಲೆಯನ್ನು ನಮ್ಮದಾಗಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಲಭವಾಗಿ ಆದಂತಹ ಚುನಾವಣೆ ರಾಜ್ಯದ ಬೇರೆ ಎಲ್ಲಿಯೂ ಆಗಿಲ್ಲ. ದೇಶದಲ್ಲಿ 300 ಸ್ಥಾನಗಳನ್ನು ಬಿಜೆಪಿ ಗೆಲ್ಲುವುದು ನಿಶ್ಚಿತ. ಎನ್‌ಡಿಎ ಒಟ್ಟಾಗಿ 400ರ ಆಸುಪಾಸಿನಲ್ಲಿ ಬರುವ ಸಾಧ್ಯತೆಯಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ನಾವು ದೇಶ, ಧರ್ಮ, ಜನರ ಬೇಕು– ಬೇಡಗಳಿಗೆ ತಕ್ಕಂತೆ ರಾಜಕಾರಣ ಮಾಡುತ್ತಿದ್ದೇವೆ. ಸೋಗಲಾಡಿ ಸಿದ್ಧಾಂತ ಇಟ್ಟುಕೊಂಡು ರಾಜಕಾರಣ ಮಾಡುತ್ತಿಲ್ಲ. ಸರ್ಕಾರ ಮತ್ತು ಸಮಾಜದ ನಡುವೆ ಜೀವಂತ ಕೊಂಡಿಯಾಗಿ ಕೆಲಸ ಮಾಡಲು ರಾಜಕೀಯ ಪಕ್ಷದ ಕಾರ್ಯಕರ್ತರು ಇರಬೇಕು’ ಎಂದು ಅವರು ಹೇಳಿದರು.

‘ಸರ್ಕಾರ ನಡೆಸಲು ಬಹುಮತ ಬೇಕು. ಆದರೆ, ನಮ್ಮ ವಿರೋಧಿಗಳನ್ನು ಸಹ ಜೊತೆಗೆ ಕರೆದುಕೊಂಡು ಹೋಗುವ ಗುರಿಯಿದೆ. ನಮಗೆ ಬಹುಮತದಲ್ಲಿ ನಂಬಿಕೆ ಇಲ್ಲ, ಸರ್ವಮತದಲ್ಲಿದೆ’ ಎಂದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !