ಭಾನುವಾರ, ಜನವರಿ 26, 2020
28 °C

ಶಿಖಂಡಿ ನಾಯಕತ್ವ ಅಧಿಕಾರದಲ್ಲಿಲ್ಲ !: ಸಂಸದ ಅನಂತಕುಮಾರ್ ಹೆಗಡೆ ಟ್ವೀಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ‘ಪ್ರಜ್ಞಾವಂತ ನಾಗರಿಕ ದೇಶದ ಇಂದಿನ ಸಂಪೂರ್ಣ ವಿದ್ಯಾಮಾನಗಳನ್ನು ಗಮನಿಸುತ್ತಿದ್ದಾನೆ. ಯಾವ ಜನ, ಯಾವ ವೇಷಭೂಷಣಗಳೊಂದಿಗೆ, ಯಾವ ಪ್ರವಾದಿಯನ್ನು ಕರೆದು, ಯಾರ ಬೆಂಬಲದೊಂದಿಗೆ ಗಲಭೆ ದೊಂಬಿಗಳನ್ನು ನಡೆಸುತ್ತಿದ್ದಾನೆ ಎಂಬುದು ತಿಳಿಯದಿರಲು ಇದೇನು 1947 ಅಲ್ಲ! ಅಂದಿನ ಶಿಖಂಡಿ ನಾಯಕತ್ವವು ಅಧಿಕಾರದಲ್ಲಿ ಇಲ್ಲ!’ ಎಂದು ಸಂಸದ ಅನಂತಕುಮಾರ್ ಹೆಗಡೆ ಟ್ವೀಟ್ ಮಾಡಿದ್ದಾರೆ.

ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಚಿತ್ರ, ವಿಡಿಯೊ ಜೊತೆ ಟ್ವೀಟ್ ಮಾಡಿರುವ ಅವರು, ‘ಸಿಎಎ ವಿರುದ್ಧ ಹಿಂಸಾತ್ಮಕವಾಗಿ ಪ್ರತಿಭಟಿಸಿದ ದೇಶದ್ರೋಹಿಗಳಿಗೆ ಧನ್ಯವಾದ. ದೇಶದ್ರೋಹಿಗಳ ಹಿಂಸಾತ್ಮಕ ಪ್ರತಿಭಟನೆಯೇ ದೇಶದಲ್ಲಿ ರಾಷ್ಟ್ರೀಯತೆ ಕಿಚ್ಚು ಹಚ್ಚಲು ಕಾರಣವಾಗುತ್ತಿದೆ. 1947ರಲ್ಲಿ ಇದ್ದ ದುರ್ಬಲ ನಾಯಕತ್ವ ಈಗ ಇಲ್ಲ. ಅಂದಿನಂತೆ ಬ್ಲ್ಯಾಕ್ ಮೇಲ್ ಮಾಡಲು ಇಂದು ಸಾಧ್ಯವಿಲ್ಲ ಎಂಬುದನ್ನು ಮನಗಾಣಬೇಕು’ ಎಂದಿದ್ದಾರೆ.

 

 

 

 

 

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು