ಆತಂಕ ಇದ್ದಿದ್ದಕ್ಕೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ: ಯಡಿಯೂರಪ್ಪ ವ್ಯಂಗ್ಯ

7

ಆತಂಕ ಇದ್ದಿದ್ದಕ್ಕೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ: ಯಡಿಯೂರಪ್ಪ ವ್ಯಂಗ್ಯ

Published:
Updated:

ಬೆಂಗಳೂರು: ಕಾಂಗ್ರೆಸ್ ನಾಯಕರು ಹಾಗೂ ಆ ಪಕ್ಷದ ಶಾಸಕರ ಮಧ್ಯೆ ನಂಬಿಕೆ, ವಿಶ್ವಾಸ ಕಳೆದುಹೋಗಿದೆ. ತಮ್ಮ ಪಕ್ಷದವರ ಬಗ್ಗೆ ಆತಂಕ ಇರುವ ಕಾರಣಕ್ಕಾಗಿಯೇ ಶಾಸಕಾಂಗ ಪಕ್ಷದ ಸಭೆ ನಡೆಸಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ವ್ಯಂಗ್ಯವಾಡಿದರು.

ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ನಿಮ್ಮ ಶಾಸಕರಿಗೆ ನಿಮ್ಮ ಪಕ್ಷದ ಬಗ್ಗೆ, ನಿಮ್ಮ ಬಗ್ಗೆ ಒಳ್ಳೆಯ ಭಾವನೆ ಇದ್ದರೆ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗದವರ ವಿರುದ್ಧ ಪಕ್ಷಾಂತರ ನಿಷೇಧ ಕಾಯಿದೆ ಅಡಿ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ಕೊಟ್ಟಿದ್ದು ಏಕೆ’ ಎಂದು ಕಾಂಗ್ರೆಸ್‌ ನಾಯಕರನ್ನು ಪ್ರಶ್ನಿಸಿದರು.

* ಇದನ್ನೂ ಓದಿ: ರಾಷ್ಟ್ರಪತಿ ಆಡಳಿತ ಹೇರಬಹುದೇ ?

‘ಕಾಂಗ್ರೆಸ್, ಜೆಡಿಎಸ್‌ನ ನಾಯಕರ ಮನೆ ಹೊತ್ತಿ ಉರಿಯುತ್ತಿದೆ. ಅದಕ್ಕೆ ಬಿಜೆಪಿಯವರು ಯಾವ ರೀತಿ ಕಾರಣರಾಗುತ್ತಾರೆ ಎಂಬ ಬಗ್ಗೆ ರಾಜ್ಯದ ಜನರಿಗೆ ಆ ಪಕ್ಷದ ನಾಯಕರು ಉತ್ತರ ನೀಡಬೇಕು. 100ಕ್ಕಿಂತ ಹೆಚ್ಚು ಸ್ಥಾನ ಗೆದ್ದರೂ ವಿರೋಧ ಪಕ್ಷದಲ್ಲಿ ಕುಳಿತುಕೊಂಡಿದ್ದೇವೆ. ಇದು ನಮ್ಮ ಸಹನೆಯನ್ನು ತೋರಿಸುತ್ತದೆಯಲ್ಲದೇ ಅಧಿಕಾರ ದಾಹ ಇಲ್ಲದಿರುವುದನ್ನು ಬಿಂಬಿಸುತ್ತದೆ’ ಎಂದು ಪ್ರತಿಪಾದಿಸಿದರು. 

‘ಆಪರೇಷನ್ ಸಂಸ್ಕೃತಿ ಆರಂಭವಾಗಿದ್ದೇ 2008ರಲ್ಲಿ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ. ಆದರೆ, 1967ರಲ್ಲಿ ಗಯಾರಾಮ್‌ ಎಂಬ ಯುನೈಟೆಡ್ ಫ್ರಂಟ್ ಶಾಸಕ 15 ದಿನಗಳಲ್ಲಿ ಮೂರು ಬಾರಿ ಕಾಂಗ್ರೆಸ್‌ಗೆ ಹೋಗಿ ಬಂದು, ನಾಲ್ಕನೇ ಬಾರಿ ಆ ಪಕ್ಷ ಸೇರಿಕೊಂಡರು. ಆಗ ಗಯಾರಾಮ್‌ ಆಯಾರಾಮ್ ಆಗಿದ್ದಾರೆ ಎಂದು ಹೇಳಿದ್ದು ಕಾಂಗ್ರೆಸ್‌ ನಾಯಕಿ ಇಂದಿರಾಗಾಂಧಿ’ ಎಂದು ಕುಟುಕಿದರು.

‘ನಿಮ್ಮ ಪಕ್ಷದ ಶಾಸಕರನ್ನು ಹಿಡಿದಿಟ್ಟುಕೊಳ್ಳುವುದು ನಿಮ್ಮ ಜವಾಬ್ದಾರಿ. ನೀವು ಕಿರುಚಾಡುತ್ತಿರುವುದನ್ನು ನೋಡಿದರೆ ಕೈಲಾಗದವರು ಮೈಪರಚಿಕೊಂಡರಂತೆ ಎಂಬ ಮಾತು ನೆನಪಾಗುತ್ತದೆ’ ಎಂದು ಅವರು ಹೇಳಿದರು. 

* ಇವನ್ನೂನ್ನೂ ಓದಿ

ಆತಂಕ ಇದ್ದಿದ್ದಕ್ಕೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ: ಯಡಿಯೂರಪ್ಪ ವ್ಯಂಗ್ಯ

ಅರ್ಧ ಯುದ್ಧ ಮುಗಿದಿದೆ, ಇನ್ನರ್ಧ ಬಾಕಿ: ಬಿಜೆಪಿ​

ಮೈತ್ರಿಗೆ ಕಿಚ್ಚು ಹಚ್ಚಿದ ಬಿಜೆಪಿ: ಜೆಡಿಎಸ್‌, ಕಾಂಗ್ರೆಸ್‌ನಲ್ಲಿ ಕಂಪನ

ಯಡಿಯೂರಪ್ಪ –ಸಿದ್ದರಾಮಯ್ಯ ವಾಕ್ಸಮರ

ಜಗದೀಶ್ ಶೆಟ್ಟರ್‌ರಿಂದ ₹ 60 ಕೋಟಿ ಆಮಿಷ: ಶಾಸಕ ಕೆ.ಎಂ.ಶಿವಲಿಂಗೇಗೌಡ ಆರೋಪ​

ಗೋವಾ, ಅಹಮದಾಬಾದ್‌ನಲ್ಲೂ ಅತೃಪ್ತ ಶಾಸಕರನ್ನು ಕೂಡಿಟ್ಟ ಬಿಜೆಪಿ?

ವಾಪಸ್ ಕರೆತಂದರು ಅನ್ನೋದಕ್ಕೆ ನಾವೇನು ಹಾಲು ಕುಡಿಯುವ ಮಕ್ಕಳಾ..?

ವಿಧಾನಸಭೆ ಸಂಖ್ಯಾಬಲದ ಲೆಕ್ಕಾಚಾರದಲ್ಲಿ ಬಿಜೆಪಿ

ಗುರುಗ್ರಾಮದ ರೆಸಾರ್ಟ್‌ನಲ್ಲಿ ಬಿಜೆಪಿಯ ನೂರಕ್ಕೂ ಹೆಚ್ಚು ಶಾಸಕರು

ಶುಭ ಸುದ್ದಿಯ ಭರವಸೆ ಕೊಟ್ಟ ಬಿಎಸ್‌ವೈ; ಐಷಾರಾಮಿ ಧಾಮದಲ್ಲಿ ಬಿಜೆಪಿ ಶಾಸಕರು

ಸಮ್ಮಿಶ್ರ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಾಸು ಪಡೆದ ಪಕ್ಷೇತರ ಶಾಸಕರು

ಹೊಸ ಸರ್ಕಾರ ರಚನೆಗೆ ಸಿದ್ಧ: ಡಿ.ವಿ.ಸದಾನಂದ ಗೌಡ

ಚುರುಕಾಯ್ತು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಟ್ವಿಟ್ ವಾರ್

ಅವಕಾಶ ಬಳಕೆಗೆ ಬಿಜೆಪಿ ಸನ್ನದ್ಧ: ಸಿ.ಟಿ.ರವಿ​

ಶಾಸಕರು ನಾಟ್‌ ರೀಚಬಲ್ ಆಗಿದ್ದಾಗ ನೀವೇನು ಮಾಡುತ್ತಿದ್ದಿರಿ: ದಿನೇಶ್ ಗುಂಡೂರಾವ್‌ಗೆ ವೇಣುಗೋಪಾಲ್ ತರಾಟೆ

ಪಕ್ಷೇತರ ಶಾಸಕರು ಬೆಂಬಲ ಹಿಂಪಡೆದಿರುವುದರಿಂದ ಸರ್ಕಾರ ಅಸ್ಥಿರವಾಗಲ್ಲ: ಪರಮೇಶ್ವರ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !