ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ಪೇನ್‌ ತಂಡವನ್ನು ಲಘುವಾಗಿ ಪರಿಗಣಿಸುವಂತಿಲ್ಲ’

Last Updated 11 ಜೂನ್ 2018, 18:57 IST
ಅಕ್ಷರ ಗಾತ್ರ

ಕ್ರತೊವೊ, ರಷ್ಯಾ (ಎಎಫ್‌ಪಿ): ‘ಜೂನ್‌ 15ರಂದು ನಮ್ಮ ತಂಡದ ವಿರುದ್ಧ ಸೆಣಸಲಿರುವ ಸ್ಪೇನ್‌ ತಂಡ ಬಲಿಷ್ಠವಾಗಿದೆ. ಆ ಪಂದ್ಯವನ್ನು ಲಘುವಾಗಿ ಪರಿಗಣಿಸುವಂತಿಲ್ಲ’ ಎಂದು ಪೋರ್ಚುಗಲ್‌ ತಂಡದ ಮಿಡ್‌ಫೀಲ್ಡರ್‌ ಮ್ಯಾನುಯಲ್‌ ಫರ್ನಾಂಡೆಸ್‌ ಅಭಿಪ್ರಾಯಪಟ್ಟಿದ್ಧಾರೆ.

‘ಆ ಪಂದ್ಯವು ನಮಗೆ ಬಹಳ ಮುಖ್ಯ. ನಮ್ಮ ತಂಡವು ಎಲ್ಲ ವಿಭಾಗಗಳಲ್ಲಿ ಶಕ್ತಿಯುತವಾಗಿದೆ. ಆದರೆ, ವಿಶ್ವಕಪ್‌ ಗೆಲ್ಲುವ ನೆಚ್ಚಿನ ತಂಡ ಎಂದೇ ಪರಿಗಣಿತವಾಗಿರುವ ಸ್ಪೇನ್‌ ನಮಗೆ ಸವಾಲಾಗಬಲ್ಲದು. ಇರಾನ್‌ ಹಾಗೂ ಮೊರೊಕ್ಕೊ ತಂಡಗಳನ್ನು ನಾವು ಕಡೆಗಣಿಸುವಂತಿಲ್ಲ’ ಎಂದು ಅವರು ತಿಳಿಸಿದ್ದಾರೆ. ಬಿ ಗುಂಪಿನಲ್ಲಿ ಪೋರ್ಚುಗಲ್‌, ಸ್ಪೇನ್‌, ಇರಾನ್‌ ಹಾಗೂ ಮೊರೊಕ್ಕೊ ತಂಡಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT