ಭಾನುವಾರ, ಏಪ್ರಿಲ್ 11, 2021
29 °C
ಬಿಎಂಎಸ್‌ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳು

ಮೂವರಿಗೆ ₹ 48 ಲಕ್ಷ ವೇತನದ ಉದ್ಯೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದ ಬಿಎಂಎಸ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ (ಬಿಎಂಎಸ್‌ಸಿಇ) ಓದಿದ ಮೂವರು ವಿದ್ಯಾರ್ಥಿಗಳು ವಾರ್ಷಿಕ ತಲಾ ₹ 48 ಲಕ್ಷ ವೇತನದ ಉದ್ಯೋಗ ಪಡೆದುಕೊಂಡಿದ್ದಾರೆ.

ದಿನೇಶ್‌ ಚೌಧರಿ ಮತ್ತು ಕೆ.ಮಧುಸೂದನ್ ಅವರಿಗೆ ಆಸ್ಟ್ರೇಲಿಯಾದ ಐಟಿ ಕಂಪನಿ ಅಟ್ಲಾಸಿಯನ್ ಕಾರ್ಪೋರೇಷನ್ ಹಾಗೂ ಇನ್ನೊಬ್ಬ ವಿದ್ಯಾರ್ಥಿ ಅಜಿತ್‌ಗೆ ಅಮೆರಿಕದ ಸಾಫ್ಟ್‌ವೇರ್‌ ಕಂಪನಿ ಕೊಹೆಸ್ಟಿ ಉದ್ಯೋಗ ನೀಡಿದೆ.

ಕಾಲೇಜಿಗೆ ಈ ಬಾರಿ ಹಲವು ಕಂಪನಿಗಳು ಕ್ಯಾಂಪಸ್‌ ಸಂದರ್ಶನಕ್ಕೆ ಬಂದಿದ್ದು, ಸಾವಿರಕ್ಕೂ ಅಧಿಕ ಉದ್ಯೋಗದ ಅವಕಾಶ ನೀಡಿವೆ.

ಇವುಗಳಲ್ಲಿ ಅರ್ಧಕ್ಕಿಂತ ಅಧಿಕ ಕಂಪನಿಗಳು ವಾರ್ಷಿಕ ₹8 ಲಕ್ಷಕ್ಕೂ ಅಧಿಕ ಸಂಬಳ ನೀಡಲು ಮುಂದಾಗಿವೆ.

‘ಪ್ರಜಾವಾಣಿ’ ಜತೆ ಸಂತಸ ಹಂಚಿಕೊಂಡ ದಿನೇಶ್‌, ಅಜಿತ್‌, ಕಾಲೇಜಿನಲ್ಲಿನ ಆಧುನಿಕ ಸೌಲಭ್ಯಗಳು ಮತ್ತು ಅತ್ಯುತ್ತಮ ಬೋಧಕರಿಂದ ಉತ್ತಮ ಉದ್ಯೋಗ ಅವಕಾಶ ದೊರಕಿತು ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು