ಮಂಗಳವಾರ, ಫೆಬ್ರವರಿ 18, 2020
27 °C

ಕದ್ರಿ ದೇವಸ್ಥಾನಕ್ಕೆ ಹೋಗಲು ಯತ್ನಿಸಿದ್ದನೇ ಬಾಂಬರ್?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಸೋಮವಾರ ಬೆಳಿಗ್ಗೆ ಮಂಗಳೂರು ಅಂತರರಾಷ್ಟ್ರೀಯ ವಿಮಾನ‌ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದ ಶಂಕಿತ ವ್ಯಕ್ತಿ ಕದ್ರಿ ಮಂಜುನಾಥೇಶ್ವರ ದೇವಸ್ಥಾನಕ್ಕೂ ಹೋಗಲು ಯತ್ನಿಸಿದ್ದ ಎಂಬ ಸಂಗತಿ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಆರೋಪಿಯು ಕೆಂಜಾರುವರೆಗೆ ನಗರ ಸಾರಿಗೆ ಬಸ್ ನಲ್ಲಿ ಬಂದಿದ್ದ. ಅಲ್ಲಿಂದ ವಿಮಾನ ನಿಲ್ದಾಣಕ್ಕೆ ಬೇರೆ ವಾಹನದಲ್ಲಿ ಬಂದಿದ್ದ. ಬಾಂಬ್‌ ಇರಿಸಿ ನಡೆದುಕೊಂಡೇ ಕೆಂಜಾರುವರೆಗೆ ಬಂದಿದ್ದ ಎಂಬುದೂ ಗೊತ್ತಾಗಿದೆ.

ಬೇರೆ ಪ್ರಯಾಣಿಕರೊಬ್ಬರನ್ನು ಕರೆತಂದಿದ್ದ ಆಟೊ ರಿಕ್ಷಾ ಕೆಂಜಾರಿಗೆ ಬಂದಾಗ ಆರೋಪಿ ಅಲ್ಲಿ ನಡೆದು ಹೋಗುತ್ತಿದ್ದ. ಕೈ ಅಡ್ಡ ಹಾಕಿ, 'ಕದ್ರಿ ದೇವಸ್ಥಾನಕ್ಕೆ ಬಿಡುತ್ತೀರಾ? ಎಷ್ಟು ದರ?' ಎಂದು ವಿಚಾರಿಸಿದ್ದ. ಆಟೊ ಚಾಲಕ ಹೇಳಿದ್ದ ಮೊತ್ತಕ್ಕೆ ಒಪ್ಪದೇ ಕಾವೂರುವರೆಗೆ ಮಾತ್ರ ಆಟೊದಲ್ಲಿ ಬಂದಿದ್ದ. ಅಲ್ಲಿ ಇಳಿದು ನಾಪತ್ತೆಯಾಗಿದ್ದಾನೆ.

ಆಟೊ ಚಾಲಕನನ್ನು ಪತ್ತೆ ಮಾಡಿರುವ ಪೊಲೀಸರು, ತೀವ್ರ ವಿಚಾರಣೆ ನಡೆಸಿದ್ದಾರೆ. ತನಿಖಾ ತಂಡಕ್ಕೆ ಆಟೊ ಚಾಲಕ ಈ ಮಾಹಿತಿ ನೀಡಿದ್ದಾನೆ.

ತುಳು ಭಾಷಿಕ?: ಶಂಕಿತ ವ್ಯಕ್ತಿಯು ತುಳು ಭಾಷೆಯಲ್ಲೇ ತನ್ನೊಂದಿಗೆ ಮಾತನಾಡಿದ್ದಾ‌ನೆ. ವಾಪಸ್ ಹೋಗುವಾಗಲೂ ಆತನ ಬಳಿ ಒಂದು ಬ್ಯಾಗ್ ಇತ್ತು ಎಂಬ ಮಾಹಿತಿಯನ್ನೂ ಆಟೊ ಚಾಲಕ ಪೊಲೀಸರಿಗೆ ತಿಳಿಸಿದ್ದಾನೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು