ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಗೇಡ್‌ನ 8ನೇ ವಸತಿ ಸಮುಚ್ಚಯ

Last Updated 28 ಮೇ 2019, 20:11 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಏರೋಸ್ಪೇಸ್ ಪಾರ್ಕ್‌ ಬಳಿಯಿರುವ ಬ್ರಿಗೇಡ್ ಎಲ್‌ ಡೊರಾಡೊದಲ್ಲಿ 8ನೇ ವಸತಿ ಸಮುಚ್ಛಯದ ಕಟ್ಟಡವನ್ನು ನಿರ್ಮಿಸುವುದಾಗಿ ಬ್ರಿಗೇಡ್‌ ಎಂಟರ್‌ಪ್ರೈಸಸ್‌ ಲಿಮಿಟೆಡ್‌ ಸಂಸ್ಥೆಯು ಮಂಗಳವಾರ ತಿಳಿಸಿದೆ.

ಈ ವಸತಿ ಸಮುಚ್ಛಯದ ಕಟ್ಟಡವನ್ನು 50 ಎಕರೆ ಜಾಗದಲ್ಲಿ ವಿನ್ಯಾಸ ಮಾಡಲಾಗುತ್ತಿದೆ. ಇಲ್ಲಿಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಮೀ‍ಪವಿದ್ದು, 15 ನಿಮಿಷದಲ್ಲಿ ತಲುಪಬಹುದು.

ಬ್ರಿಗೇಡ್‌ ಎಲ್‌ ಡೊರಾಡೊದಲ್ಲಿ ನಿರ್ಮಿಸುತ್ತಿರುವ ಕಟ್ಟಡದಲ್ಲಿ 2 ಮತ್ತು 3 ಬಿಎಚ್‌ಕೆ ಮನೆಗಳನ್ನು ಅಚ್ಚುಕಟ್ಟಾಗಿ ವಿನ್ಯಾಸಗೊಳಿಸಲಾಗುತ್ತದೆ.

ಬ್ರಿಗೇಡ್‌ ಎಂಟರ್‌ಪ್ರೈಸಸ್ಕಾರ್ಯನಿರ್ವಾಹಕ ನಿರ್ದೇಶಕಿ ಪವಿತ್ರಾ ಶಂಕರ್, ‘ಇತ್ತೀಚಿನ ದಿನಗಳಲ್ಲಿ ವಿಶಾಲ ಮನೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಆದ್ದರಿಂದ ಅಂತಹ ಗುಣಮಟ್ಟದ ವಸತಿಗಳನ್ನುಒದಗಿಸುವ ಗುರಿ ಹೊಂದಿದ್ದೇವೆ. ಉತ್ತಮ ಕ್ರೀಡಾ ಪರಿಕರಗಳನ್ನು ಒದಗಿಸುತ್ತೇವೆ. ಆಟದ ಮೈದಾನ, ಉದ್ಯಾನಗಳನ್ನು ನಿರ್ಮಿಸಲಿದ್ದೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT