ಬುಧವಾರ, ಆಗಸ್ಟ್ 5, 2020
26 °C

ಕಲಾಗ್ರಾಮದಲ್ಲೇ ಜಿಎಸ್‍ಎಸ್, ಅನಂತಮೂರ್ತಿ ಸ್ಮಾರಕ ನಿರ್ಮಿಸಿ: ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಲಾಗ್ರಾಮದಲ್ಲಿರುವ ಸಾಹಿತಿಗಳಾದ ಜಿ.ಎಸ್.ಶಿವರುದ್ರಪ್ಪ ಹಾಗೂ ಯು.ಆರ್.ಅನಂತಮೂರ್ತಿ ಸಮಾಧಿಗಳ ಜಾಗದಲ್ಲೇ ಸ್ಮಾರಕ ನಿರ್ಮಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಕರ್ನಾಟಕ ವಿಕಾಸ ರಂಗ ಮನವಿ ಮಾಡಿದೆ.

'ಕಲಾಗ್ರಾಮದಲ್ಲಿ ಶಿವರುದ್ರಪ್ಪ ಅವರ ಸ್ಮಾರಕ ನಿರ್ಮಿಸುವುದಾಗಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದರು. ಯು.ಆರ್.ಅನಂತಮೂರ್ತಿ ಅವರ ಸ್ಮಾರಕ ನಿರ್ಮಿಸುವುದಾಗಿ ಸರ್ಕಾರ ತಿಳಿಸಿತ್ತು. ಕಲಾಗ್ರಾಮದಲ್ಲೇ ಇಬ್ಬರೂ ಸಾಹಿತಿಗಳ ಸ್ಮಾರಕ ನಿರ್ಮಿಸಬೇಕು‘ ಎಂದು ವಿಕಾಸ ರಂಗದ ಪ್ರಧಾನ ಸಂಚಾಲಕ ವ.ಚ.ಚನ್ನೇಗೌಡ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು