ಮಂಗಳವಾರ, ಜನವರಿ 28, 2020
21 °C

ಸಂಪುಟ ವಿಸ್ತರಣೆ ವಿಳಂಬ ಶಾಸಕರ ಗೊಣಗಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಚಿವರಾಗಬೇಕು ಎಂಬ ಧಾವಂತದಲ್ಲಿರುವ ನೂತನ ಶಾಸಕರು ಮಂತ್ರಿಗಿರಿಯ ಕುರ್ಚಿಯಲ್ಲಿ ಕೂರಲು ಇನ್ನು ಎಷ್ಟು ದಿನ ಕಾಯಬೇಕೊ ಎಂಬ ಗೊಣಗಾಟ ಆರಂಭಿಸಿದ್ದಾರೆ.

ಯಶವಂತಪುರ ಶಾಸಕ ಎಸ್‌.ಟಿ.ಸೋಮಶೇಖರ್‌ ಅವರು ಶಾಸಕರಾಗಿ ಪ್ರಮಾಣ ಸ್ವೀಕರಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ ತಮ್ಮ ಅಸಮಾಧಾನ ಹೊರ ಹಾಕಿದರು.

‘ಶಾಸಕರಾಗಿ ಪ್ರಮಾಣ ಸ್ವೀಕರಿಸಲು ಇಷ್ಟು ದಿನ ಬೇಕಾಯಿತು. ಸಚಿವರಾಗಿ ಪ್ರಮಾಣ ತೆಗೆದುಕೊಳ್ಳಲು ಇನ್ನೆಷ್ಟು ದಿನಗಳು ಕಾಯಬೇಕೊ’ ಎಂದು ಕಿಡಿ ಕಾರಿದರು.

ಸಚಿವ ಸ್ಥಾನ ಖಚಿತವಾಗಿದ್ದರೂ, ಸಂಕ್ರಾಂತಿ ಬಳಿಕವೇ ಸಚಿವ ಸಂಪುಟ ವಿಸ್ತರಣೆ ಎಂಬುದಾಗಿ ಸುಳಿವು ನೀಡಿರುವುದು ಹಲವು ಶಾಸಕರಲ್ಲಿ ನಿರಾಸೆ ಮೂಡಿಸಿದೆ ಎಂದು ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು