ಸಿ.ಎಂ. ವಿರುದ್ಧದ ಖಾಸಗಿ ದೂರು: ಪೊಲೀಸರಿಗೆ ವರ್ಗಾಯಿಸಿದ ಕೋರ್ಟ್

ಶನಿವಾರ, ಮೇ 25, 2019
26 °C

ಸಿ.ಎಂ. ವಿರುದ್ಧದ ಖಾಸಗಿ ದೂರು: ಪೊಲೀಸರಿಗೆ ವರ್ಗಾಯಿಸಿದ ಕೋರ್ಟ್

Published:
Updated:

ಬೆಂಗಳೂರು: ‘ಆದಾಯ ತೆರಿಗೆ (ಐ.ಟಿ) ಇಲಾಖೆ ಅಧಿಕಾರಿಗಳ ದಾಳಿ ಖಂಡಿಸಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ 
ನೇತೃತ್ವದಲ್ಲಿ ಐ.ಟಿ.ಕಚೇರಿ ಮುಂದೆ ಕಳೆದ ತಿಂಗಳು ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲು ನಿರ್ದೇಶಿಸಬೇಕು’ ಎಂಬ ಖಾಸಗಿ ದೂರನ್ನು ಇಲ್ಲಿನ ಜನಪ್ರತಿನಿಧಿಗಳ ಕೋರ್ಟ್‌ ಪೊಲೀಸರಿಗೆ ವರ್ಗಾಯಿಸಿದೆ.

ಈ ಕುರಿತಂತೆ ಎ.ಮಲ್ಲಿಕಾರ್ಜುನ ಸಲ್ಲಿಸಿರುವ ದೂರನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ರಾಮಚಂದ್ರ ಡಿ.ಹುದ್ದಾರ ಅವರು ಗುರುವಾರ ವಿಚಾರಣೆ ನಡೆಸಿ, ಮುಂದಿನ ಕ್ರಮಕ್ಕೆ ದೂರನ್ನು ಕಮರ್ಶಿಯಲ್‌ ಸ್ಟ್ರೀಟ್‌ ಪೊಲೀಸ್‌ ಠಾಣೆಗೆ ವರ್ಗಾಯಿಸಿದರು.

ಬರಹ ಇಷ್ಟವಾಯಿತೆ?

 • 19

  Happy
 • 2

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !