ಕಾವೇರಿ ಪ್ರಾಧಿಕಾರದ ಮೊದಲ ಸಭೆ ಜುಲೈ 2ರಂದು

7
ಕಾವೇರಿ ಕಣಿವೆ ವ್ಯಾಪ್ತಿಯ ಸದಸ್ಯರು ಭಾಗಿ

ಕಾವೇರಿ ಪ್ರಾಧಿಕಾರದ ಮೊದಲ ಸಭೆ ಜುಲೈ 2ರಂದು

Published:
Updated:
ಕಾವೇರಿ ನದಿ

ನವದೆಹಲಿ: ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಕಾರ್ಯ ವೈಖರಿ ಕುರಿತು ಹೊರಡಿಸಿರುವ ಅಧಿಸೂಚನೆಯಲ್ಲಿ ಇರುವ ಅಂಶಗಳ ಬಗ್ಗೆ ಚರ್ಚಿಸಲು ಕೇಂದ್ರದ ಜಲಸಂಪನ್ಮೂಲ ಸಚಿವಾಲಯ ಜುಲೈ 2ರಂದು ಕಣಿವೆ ವ್ಯಾಪ್ತಿಯ ಎಲ್ಲ ರಾಜ್ಯಗಳ ಸದಸ್ಯರ ಸಭೆಯನ್ನು ಆಯೋಜಿಸಿದೆ.

ಕೇಂದ್ರದ ಜಲಸಂಪನ್ಮೂಲ ಅಭಿವೃದ್ಧಿ ಸಚಿವ ನಿತಿನ್‌ ಗಡ್ಕರಿ ಅವರನ್ನು ಇತ್ತೀಚೆಗೆ ಭೇಟಿ ಮಾಡಿದ್ದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ, ಅಧಿಸೂಚನೆಯಲ್ಲಿ ಇರುವ ಪ್ರಮುಖ ಅಂಶಗಳು, ಷರತ್ತುಗಳು, ನಿಯಮಗಳು ರಾಜ್ಯದ ರೈತರಿಗೆ ಮಾರಕವಾಗಲಿವೆ ಎಂದು ತಿಳಿಸಿದ್ದರಲ್ಲದೆ, ಮಾರಕ ಅಂಶಗಳನ್ನು ಅಧಿಸೂಚನೆಯಿಂದ ಕೈಬಿಡುವಂತೆ ಆಗ್ರಹಿಸಿದ್ದರು.

‘ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರು ಇಂಥದ್ದೇ ಬೆಳೆಯನ್ನು ಬೆಳೆಯಬೇಕು ಎಂಬ ಕಟ್ಟಪ್ಪಣೆ ಇರಕೂಡದು ಹಾಗೂ ನಮ್ಮ ಪಾಲಿನ ನೀರನ್ನು ಹೇಗಾದರೂ ಬಳಕೆ ಮಾಡಲು ಅವಕಾಶ ಇರಬೇಕು. ಒಕ್ಕೂಟ ವ್ಯವಸ್ಥೆಯಲ್ಲಿ ಅವೈಜ್ಞಾನಿಕವಾದ ಷರತ್ತುಗಳನ್ನು ವಿಧಿಸಬಾರದು’ ಎಂದು ಅವರು ಕೋರಿದ್ದರು.

ನದಿ ನೀರಿನ ಒಳಹರಿವು ಮತ್ತು ಹೊರಹರಿವಿನ ಪ್ರಮಾಣ, ಜಲಾಶಯಗಳ ನಿರ್ವಹಣೆ, ನೀರಿನ ಹಂಚಿಕೆ, ಮಳೆ ಕೊರತೆ ವರ್ಷದಲ್ಲಿ ಪಡೆಯಬಹುದಾದ ಪಾಲು, ನೀರಾವರಿ ಸೌಲಭ್ಯ, ಬಿಳಿಗುಂಡ್ಲು ಮಾಪನ ಕೇಂದ್ರಗಳ ಮೇಲ್ವಿಚಾರಣೆ ಮತ್ತಿತರ ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಯಲಿದೆ. ಕಣಿವೆ ವ್ಯಾಪ್ತಿಯ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೆರಿಯ ಸದಸ್ಯರು ಭಾಗವಹಿಸಲಿದ್ದಾರೆ.

ರಾಜ್ಯದ ಜಲಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಕೇಶ ಸಿಂಗ್‌ ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !