ಸೋಮವಾರ, ಮೇ 25, 2020
27 °C

ಚನ್ನರಾಯಪಟ್ಟಣ: ಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಚನ್ನರಾಯಪಟ್ಟಣ ತಾಲ್ಲೂಕಿನ ಮಂಚನಹಳ್ಳಿಯಲ್ಲಿ  ಹೋಂ ಕ್ವಾರಂಟೈನ್ ನಲ್ಲಿದ್ದ‌ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಮೂರು ದಿನಗಳ ಹಿಂದೆ ಮುಂಬೈ ನಿಂದ ಬಂದಿದ್ದ  52 ವರ್ಷದ ವ್ಯಕ್ತಿ ಯ ಆರೋಗ್ಯ ತಪಾಸಣೆ ನಡೆಸಿ
14 ದಿನ ಪ್ರತ್ಯೇಕವಾಗಿ ಇರುವಂತೆ ವೈದ್ಯರು  ಸೂಚಿಸಿದ್ದರು.

ಶನಿವಾರ ಮಧ್ಯರಾತ್ರಿ ಮನೆಯಿಂದ ಹೊರ ಬಂದು ಮರಕ್ಕೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 
ಅವರು ಅಸ್ತಮಾ ಹಾಗೂ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು.  

ಪತ್ನಿ ಹಾಗೂ ಮಕ್ಕಳನ್ನ ಮುಂಬೈನಲ್ಲಿ  ಬಿಟ್ಟು ಒಬ್ಬರೇ ಊರಿಗೆ ಬಂದಿದ್ದರು.

ಶ್ರವಣಬೆಳಗೊಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು