ಶನಿವಾರ, ಜನವರಿ 18, 2020
19 °C

ಗ್ರಹಣ ದೋಷ: ಕೇರಳ ದೇಗುಲಕ್ಕೆ ಬಿಎಸ್‌ವೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮಂಗಳವಾರ ಬೆಳಿಗ್ಗೆ ಕೇರಳದ ತಿರುವನಂತಪುರದ ಅನಂತ ಪದ್ಮನಾಭ ಮತ್ತು ರಾಜರಾಜೇಶ್ವರಿ ದೇವಸ್ಥಾನಗಳಿಗೆ ಭೇಟಿ ನೀಡಲಿದ್ದಾರೆ.

ಗುರುವಾರದ ಸೂರ್ಯಗ್ರಹಣದಿಂದ ದೋಷ ಉಂಟಾಗುತ್ತದೆ ಎಂದು ಜ್ಯೋತಿಷಿಗಳ ಮಾತನ್ನು ನಂಬಿರುವ ಬಿಎಸ್‌ವೈ, ಅದರ ಪರಿಹಾರಕ್ಕಾಗಿ ಕೇರಳದ ದೇಗುಲಗಳಲ್ಲಿ ವಿಶೇಷ ಹೋಮ ಮತ್ತು ಪೂಜೆಯನ್ನು ಹಮ್ಮಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸೂರ್ಯ ಗ್ರಹಣದಿಂದ ವೃಶ್ಚಿಕ ಮತ್ತು ಧನಸ್ಸು ರಾಶಿಯವರಿಗೆ ದೋಷ ಇದೆ ಎಂದು ಜ್ಯೋತಿಷಿಗಳು ಹೇಳಿದ್ದಾರೆ. ಯಡಿಯೂರಪ್ಪ ಅವರದು ವೃಶ್ಚಿಕ ರಾಶಿಯಾಗಿದ್ದು, ದೋಷ ಪರಿಹಾರಕ್ಕಾಗಿ ಕೇರಳದ ದೇಗುಲದ ಮೋರೆ ಹೋಗಿದ್ದಾರೆ ಎನ್ನಲಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು