ಮಂಗಳವಾರ, ಜೂನ್ 2, 2020
27 °C

ನಟ ಅಂಬರೀಶ್ ಟ್ರಸ್ಟ್ ರಚಿಸಲು ಸಿಎಂ ಭರವಸೆ:ರಾಕ್ ಲೈನ್ ವೆಂಕಟೇಶ್

ಪ್ರಜಾವಾಣಿ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಟ, ರಾಜಕಾರಣಿ ಡಾ.ಅಂಬರೀಶ್ ಪ್ರತಿಷ್ಠಾನಕ್ಕೂ ಟ್ರಸ್ಟ್ ರಚಿಸುವುದಾಗಿ ಸಿಎಂ ಯಡಿಯೂರಪ್ಪ ಭರವಸೆ ನೀಡಿದ್ದಾರೆ ಎಂದು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಹೇಳಿದ್ದಾರೆ.

ಸೋಮವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಭೇಟಿ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮುಂದಿನ ತಿಂಗಳು 24ರ ಒಳಗೆ ಅಂಬರೀಶ್ ಟ್ರಸ್ಟ್ ರಚಿಸಬೇಕೆಂದು ಮನವಿ ಮಾಡಿದ್ದೆವು. ಈ ಮನವಿಯನ್ನು ಪುರಸ್ಕರಿಸಿದ್ದು ಟ್ರಸ್ಟ್ ರಚಿಸುವುದಾಗಿ ಹೇಳಿದ್ದಾರೆ ಎಂದರು.

ಡಾ.ರಾಜ್‌‌ಕುಮಾರ್ ಪ್ರತಿಷ್ಠಾನದ ಸ್ಥಳ ಈಗ ಒಂದು ಪ್ರವಾಸೋದ್ಯಮ ಸ್ಥಳವಾಗಿದೆ. ಈ ಪ್ರತಿಷ್ಠಾನವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಬೇಕು. ಈ ಹಿಂದೆ ಈ ಯೋಜನೆಗೆ ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು 22 ಕೋಟಿ ಕೊಡಲು ಒಪ್ಪಿದ್ದು, ಅಲ್ಲದೆ,10 ಕೋಟಿ ಬಜೆಟ್ ನಲ್ಲಿ ನಿಗದಿ ಮಾಡಿದ್ದರು. ಈ ಅನುದಾನವನ್ನು ಈಗಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಳಿಯೂ ಕೇಳಿದ್ದೇವೆ. ಹಣ ಬಿಡುಗಡೆ ಮಾಡಲು ಮುಖ್ಯಮಂತ್ರಿ ಒಪ್ಪಿದ್ದಾರೆ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು