ಬುಧವಾರ, ಆಗಸ್ಟ್ 4, 2021
25 °C

ಕಾಮೆಡ್‌–ಕೆ ಪರೀಕ್ಷೆ ಆ.1ಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು‌: ಜುಲೈ 25ರಂದು ನಿಗದಿಯಾಗಿದ್ದ 'ಕಾಮೆಡ್‌–ಕೆ ಯುಜಿಇಟಿ 2020’ ಪರೀಕ್ಷೆಯನ್ನು ಆಗಸ್ಟ್‌ 1ಕ್ಕೆ ಮುಂದೂಡಲಾಗಿದೆ. ಕಾಮೆಡ್‌–ಕೆ ಪರೀಕ್ಷೆ ಮುಗಿಸಿದ ಬಳಿಕ ನೀಟ್‌ ಪರೀಕ್ಷಾ ಕೇಂದ್ರಗಳಿಗೆ ತೆರಳಲು ಕಷ್ಟವಾಗುತ್ತದೆ ಎಂದು ಹಲವಾರು ಮಂದಿ ಮನವಿ ಸಲ್ಲಿಸಿದ ಕಾರಣ ಪರೀಕ್ಷೆಯನ್ನು ಮುಂದಕ್ಕೆ ಹಾಕಲಾಗಿದೆ.

ಆಗಸ್ಟ್‌ 1ರಂದು ಬೆಳಿಗ್ಗೆ 9ರಿಂದ 12 ಹಾಗೂ ಮಧ್ಯಾಹ್ನ 2ರಿಂದ 5ರವರೆಗೆ ಪರೀಕ್ಷೆ ನಡೆಯಲಿದೆ. ಅಭ್ಯರ್ಥಿಗಳಿಗೆ ತಮ್ಮ ಅರ್ಜಿಗಳಲ್ಲಿ ಬದಲಾವಣೆಗೆ ಇದೇ 22ರಿಂದ 25ರವರೆಗೆ ಅವಕಾಶ ಸಿಗಲಿದೆ. ಮಾಹಿತಿಗೆ www.comedk.org ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು