ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಜುನ್‌ ಸರ್ಜಾ ವಿರುದ್ಧ ಕಬ್ಬನ್‌ ಪಾರ್ಕ್ ಪೊಲೀಸ್‌ ಠಾಣೆಯಲ್ಲಿ ಶ್ರುತಿ ದೂರು

Last Updated 27 ಅಕ್ಟೋಬರ್ 2018, 12:49 IST
ಅಕ್ಷರ ಗಾತ್ರ

ಬೆಂಗಳೂರು: ನಟ, ನಿರ್ದೇಶಕ ಅರ್ಜುನ್‌ ಸರ್ಜಾ ವಿರುದ್ಧಲೈಂಗಿಕ ದೌರ್ಜನ್ಯ ಆರೋಪ ಮಾಡಿರುವ ನಟಿ ಶ್ರುತಿ ಹರಿಹರನ್‌ ನಗರದ ಕಬ್ಬನ್‌ ಪಾರ್ಕ್ ಪೊಲೀಸ್‌ ಠಾಣೆಯಲ್ಲಿ ಶನಿವಾರ ದೂರು ನೀಡಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿದ್ದ ನಟಿ ಶ್ರುತಿ ಹರಿಹರನ್‌ ಹಾಗೂ ನಟ ಅರ್ಜುನ್ ಸರ್ಜಾ ಮಧ್ಯದ ಮೀಟೂ ಕಾದಾಟ ಈಗ ಕಾನೂನು ಹೋರಾಟದ ಸ್ವರೂಪ ಪಡೆದುಕೊಂಡಿದೆ. ಈಗಾಗಲೇಸರ್ಜಾ ಆಪ್ತ ನೀಡಿರುವ ದೂರು ಪರಿಗಣಿಸಿ ಶ್ರುತಿ ವಿರುದ್ಧ ಪೊಲೀಸ್ ಎಫ್ಐಆರ್ ದಾಖಲಿಸಿದ್ದರು. ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಸಭೆಯ ಬಳಿಕ ಶ್ರುತಿ, ಸರ್ಜಾ ಆಪ್ತ ಪ್ರಶಾಂತ್‌ ವಿರುದ್ಧ ದೂರು ದಾಖಲಿಸಿದ್ದರು.‘ಜೀವ ಬೆದರಿಕೆ ಹಾಗೂ ಮಹಿಳೆಯ ಗೌರವಕ್ಕೆ ಧಕ್ಕೆ ತಂದ ಆರೋಪದಡಿ ಪ್ರಶಾಂತ್‌ ವಿರುದ್ಧ ಎಫ್ಐಆರ್‌ ದಾಖಲಿಸಿಕೊಳ್ಳಲಾಗಿದೆ.

ಇದೀಗ ಶ್ರುತಿ ಸರ್ಜಾ ವಿರುದ್ಧ ಲೈಂಗಿಕ ದೌರ್ಜನ್ಯ ದೂರು ನೀಡಿದ್ದಾರೆ. 2015ರಲ್ಲಿ ನಡೆದಿರುವ ಘಟನೆಗಳನ್ನು ದೂರಿನಲ್ಲಿ 29 ವರ್ಷ ವಯಸ್ಸಿನ ಶ್ರುತಿ ವಿವರಿಸಿದ್ದಾರೆ. ಈ ದೂರಿನಲ್ಲಿ ಶ್ರುತಿ ಹೆಸರಿನೊಂದಿಗೆ ರಾಮ್‌ ಕುಮಾರ್‌ ಅವರ ಪತ್ನಿ ಎಂದು ಆವರಣದಲ್ಲಿ ಬರೆಯಲಾಗಿದ್ದು, ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

(ಶ್ರುತಿ ಹರಿಹರನ್‌ ನೀಡಿರುವ ದೂರಿನ ಪ್ರತಿ)

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT