ಗುರುವಾರ , ಫೆಬ್ರವರಿ 20, 2020
27 °C

ಮತದಾರರಿಗೆ ಹಂಚಲು ಬಿಜೆಪಿ ತಂದಿದ್ದ ಸೀರೆ ಪತ್ತೆ: ಕಾಂಗ್ರೆಸ್ ಟ್ವೀಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರ: ಹುಣಸೂರು ವಿಧಾಸ ಸಭಾ ಕ್ಷೇತ್ರದಲ್ಲಿ ಮತದಾರರಿಗೆ ಬಿಜೆಪಿ ಹಂಚಲು ಸಂಗ್ರಹಿಸಿದ್ದ 30 ಸಾವಿರ ಸೀರೆಗಳು ಪತ್ತೆಯಾಗಿವೆ ಎಂದು ಆರೋಪಿಸಿ ಕಾಂಗ್ರೆಸ್ ಟ್ವೀಟ್ ಮಾಡಿದೆ.

ಸೀರೆಯ ಪ್ಯಾಕ್ ಮೇಲೆ ಸಿ.ಪಿ ಯೋಗೇಶ್ವರ್‌ ಅವರ ಭಾವ ಚಿತ್ರವಿದೆ ಎಂದು ಟ್ವೀಟ್‌ನಲ್ಲಿ ಕಾಂಗ್ರೆಸ್ ಪಕ್ಷವು ಆರೋಪಿಸಿದ್ದು ಇದನ್ನು ಚುನಾವಣಾ ಆಯೋಗಕ್ಕೆ ಟ್ಯಾಗ್ ಮಾಡಿದೆ.

ಬಿಜೆಪಿಯು ಮತದಾರರಿಗೆ ಸೀರೆ ಹಂಚುವ ಮೂಲಕ ಮತದಾರರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದೆ,  ಹುಣಸೂರು ಕ್ಷೇತ್ರದ  ಬಿಜೆಪಿ ಅಭ್ಯರ್ಥಿಯ ನಾಮಪತ್ರ ತಿರಸ್ಕರಿಸಬೇಕು ಎಂದು ಚುನಾವಣಾ ಆಯೋಗವನ್ನು ಆಗ್ರಹಿಸಿದೆ. 

ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಅನರ್ಹ ಶಾಸಕ ಎಚ್‌.ವಿಶ್ವನಾಥ್, ಜೆಡಿಎಸ್‌‌ನಿಂದ ಸೋಮಶೇಖರ್‌ ಹಾಗೂ ಕಾಂಗ್ರೆಸ್‌ನಿಂದ ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಅವರು ಸ್ಪರ್ಧಿಸಲಿದ್ದಾರೆ.

ಇದನ್ನೂ ಓದಿ: ಜಿ.ಟಿ.ದೇವೇಗೌಡರ ನಡೆ ನಿಗೂಢ: ಬೆಂಬಲ ಗಿಟ್ಟಿಸಲು ಮೂರೂ ಪಕ್ಷಗಳ ಪ್ರಯತ್ನ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು