ಮಂಗಳವಾರ, ಫೆಬ್ರವರಿ 18, 2020
27 °C
ಕೊರೋನ: ಹಾಂಕಾಂಗ್‍ನಲ್ಲಿ ತಂಗಿದ್ದ ಪ್ರವಾಸಿ ಹಡಗಿನ ಸಿಬ್ಬಂದಿ

ಕುಂಪಲ: ಮದುವೆ ಗಂಡು ಗೌರವ್‌ ವಾಪಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಳ್ಳಾಲ: ಚೀನಾದಲ್ಲಿ ವ್ಯಾಪಿಸಿರುವ ಕೊರೊನ ವೈರಸ್‍ ಸೋಂಕು ಎಚ್ಚರಿಕೆಯಿಂದಾಗಿ ಹಾಂಕಾಂಗ್‍ನಲ್ಲಿ ಪ್ರವಾಸಿ ಹಡಗಿನಲ್ಲಿ ಕಳೆದ ಕೆಲವು ದಿನಗಳಿಂದ ಸಿಲುಕಿಕೊಂಡಿದ್ದ ಕುಂಪಲದ ಗೌರವ್  ಮಂಗಳವಾರ ಸಂಜೆ ಕುಂಪಲದ ಮನೆಗೆ ತಲುಪಿದ್ದಾರೆ.

ಹಾಂಕ್‍ಕಾಂಗ್‍ನಿಂದ ತೈವಾನ್ ಪ್ರವಾಸ ಮುಗಿಸಿ ಹಾಂಕಾಂಗ್‍ನ ಬಂದರಿನಲ್ಲಿ ಗೌರವ್‍ ಉದ್ಯೋಗದಲ್ಲಿದ್ದ ಹಡಗನ್ನು ಸುರಕ್ಷತೆಯ ದೃಷ್ಟಿಯಿಂದ ಪ್ರವಾಸಿಗ ಸಹಿತ ತಡೆಹಿಡಿದಿದ್ದರಿಂದ ಕಳೆದ ಸೋಮವಾರ ನಡೆಯಬೇಕಾಗಿದಿದ್ದ ಮದುವೆಯನ್ನು ರದ್ದುಮಾಡಲಾಗಿತ್ತು.

‘ಮದುವೆಯ ಕುರಿತು ಇನ್ನೆರಡು ದಿನಗಳಲ್ಲಿ ದಿನಾಂಕ ನಿಗದಿಪಡಿಸಲಿದ್ದು, ಕಂಪನಿಯಿಂದ ಕರೆ ಬಂದ ಬಳಿಕ ಉದ್ಯೋಗಕ್ಕೆ ತೆರಳುತ್ತೇನೆ’ ಎಂದು ತಿಳಿಸಿದರು.

ಸುರಕ್ಷತೆಯ ತಪಾಸಣೆಗಳು ಮುಗಿದ ಬಳಿಕ ಕಳೆದ ಭಾನುವಾರ ಹಡಗಿನಲ್ಲಿದ್ದ ಪ್ರವಾಸಿಗರನ್ನು ಬಂದರಿನಿಂದ ಅವರ ದೇಶಗಳಿಗೆ ಕಳುಹಿಸಲು ವ್ಯವಸ್ಥೆ ಮಾಡಿದರೆ ಗೌರವ್ ಸೇರಿಂದಂತೆ ಹಡಗಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಭಾರತೀಯ ಸಿಬ್ಬಂದಿಯನ್ನು ಸುರಕ್ಷಿತವಾಗಿ  ಕಳುಹಿಸಿಕೊಟ್ಟಿದ್ದು, ಚೀನಾ ಸೇರಿದಂತೆ ಕೆಲವು ದೇಶಗಳ ಸಿಬ್ಬಂದಿಯನ್ನು ಸುರಕ್ಷತೆಯ ನಿಟ್ಟಿನಲ್ಲಿ ಹಾಂಕ್‍ಕಾಂಗ್‍ನಲ್ಲೇ ಉಳಿಸಲಾಗಿದೆ.

ಮನೆಗೆ ಬಂದಿರುವ ಗೌರವ್ ಪ್ರತಿಕ್ರಿಯಿಸಿ ‘ಡ್ರೀಮ್ ವರ್ಲ್ಡ್‌ ಹಡಗಿನ ಮುಖ್ಯಸ್ಥರು ಪ್ರವಾಸಿಗರ ಸುರಕ್ಷತೆ ಮತ್ತು ಆರೋಗ್ಯಕ್ಕೆ ಹೆಚ್ಚಿನ ಕಾಳಜಿ ವಹಿಸಿದ್ದು, ನನನ್ನು ಭಾರತಕ್ಕೆ ಕಳುಹಿಸಲು ವಿಶೇಷವಾಗಿ ಸಹಕರಿಸಿದ್ದಾರೆ. ಹಾಂಕಾಂಗ್‍ನಿಂದ ಹೆಚ್ಚಿನ ದೇಶಗಳಿಗೆ ತೆರಳುವ ವಿಮಾನಗಳು ರದ್ದಾಗಿರುವುದರಿಂದ ಆದೇಶದ ಸಿಬಂದಿಗಳ ಎಲ್ಲಾ ರಕ್ಷಣೆಯನ್ನು ಕಂಪನಿ ವಹಿಸಿಕೊಂಡಿದ್ದು, ಸೋಮವಾರ ನನ್ನನ್ನು ಮತ್ತು ನ್ನೊಬ್ಬರು ಸಿಬ್ಬಂದಿಯನ್ನು ಮುಂಬೈ ಮಾರ್ಗವಾಗಿ ಕಳುಹಿಸಿಕೊಟ್ಟಿದ್ದರು’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು