ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ವಾರಂಟೈನ್‌ ಅಲ್ಲಿ ಇರಬೇಕಿದ್ದ ವ್ಯಕ್ತಿಯಿಂದ ಸಂಬಂಧಿಗಳ ಭೇಟಿ: ಆತಂಕ ಸೃಷ್ಟಿ

Last Updated 21 ಮಾರ್ಚ್ 2020, 10:31 IST
ಅಕ್ಷರ ಗಾತ್ರ

ರಾಯಚೂರು: ಕೈ ಮಣಿಕಟ್ಟಿನ ಮೇಲೆ ‘ಹೋಂ ಕ್ವಾರಂಟೈನ್‌’ (ಆರೋಗ್ಯಕ್ಕಾಗಿ ಪ್ರತ್ಯೇಕ ವಾಸ) ಸೀಲ್‌ ಹಾಕಲಾಗಿದ್ದ ಕಲಬುರ್ಗಿಯ ಜಿಲ್ಲೆಯ ವ್ಯಕ್ತಿಯೊಬ್ಬರು, ತಾಲ್ಲೂಕಿನ ಶಕ್ತಿನಗರದಲ್ಲಿರುವ ಸಂಬಂಧಿಗಳ ಮನೆಗೆ ಭೇಟಿ ನೀಡಿರುವ ಸುದ್ದಿಯಿಂದ ಸುತ್ತಮುತ್ತಲಿನ ಜನರು ಆತಂಕಕ್ಕೊಳಗಾಗಿದ್ದಾರೆ.

ಈ ಬಗ್ಗೆ ತಾಲ್ಲೂಕು ಆರೋಗ್ಯಾಧಿಕಾರಿಗೆ ಜನರು ದೂರು ನೀಡಿದ್ದಾರೆ. ಸದ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಆ ಮನೆಯಿಂದ ಯಾರೂ ಹೊರಗೆ ಬರದಂತೆ, ಹೊರಗಿನವರು ಮನೆಯತ್ತ ಹೋಗದಂತೆ ಬಂದೋಬಸ್ತ್‌ ಮಾಡಿದ್ದಾರೆ. ಶೀಘ್ರದಲ್ಲೇ ಮನೆ ಸದಸ್ಯರೆಲ್ಲರ ಆರೋಗ್ಯ ತಪಾಸಣೆ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.

ದುಬೈನಿಂದ ಶಹಾಬಾದ್‌ಗೆ ಬಂದಿದ್ದ ವ್ಯಕ್ತಿಯ ಮಣಿಕಟ್ಟಿನ ಮೇಲೆ ಹೈದರಾಬಾದ್‌ ವಿಮಾನ ನಿಲ್ದಾಣದಲ್ಲಿ ಸೀಲ್‌ ಹಾಕಲಾಗಿತ್ತು. ಕೈಗೆ ಸೀಲ್‌ ಇರುವುದನ್ನು ಜನರು ಶನಿವಾರ ಬೆಳಿಗ್ಗೆ ಗಮನಿಸಿದ್ದಾರೆ. ಕೂಡಲೇ ಆ ವ್ಯಕ್ತಿಯು ಶಹಾಬಾದ್‌ಗೆ ಮರಳಿದ್ದಾರೆ ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT