ಶನಿವಾರ, ಮೇ 30, 2020
27 °C

ಕೋವಿಡ್-19| ಕೆಂಪು,ಕಿತ್ತಳೆ ಮತ್ತು ಹಸಿರು ವಲಯದಲ್ಲಿರುವ ರಾಜ್ಯದ ಜಿಲ್ಲೆಗಳ ಪಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

police

ಬೆಂಗಳೂರು: ಕೊರೊನಾವೈರಸ್ ಸೋಂಕು ವ್ಯಾಪಿಸಿರುವ ಪ್ರಮಾಣದ ಆಧಾರದಲ್ಲಿ ದೇಶದಾದ್ಯಂತವಿರುವ 733 ಜಿಲ್ಲೆ ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಕೆಂಪು, ಕಿತ್ತಳೆ, ಹಳದಿ, ಹಸಿರು ವಲಯಗಳಾಗಿ ಕೇಂದ್ರ ಸರ್ಕಾರ ವಿಂಗಡಿಸಿದೆ.

ಕೆಂಪು ವಲಯದಲ್ಲಿ ರಾಜ್ಯದಲ್ಲಿ 6 ಜಿಲ್ಲೆಗಳಿದ್ದರೆ, ಹಳದಿ ವಲಯದಲ್ಲಿ ನಾಲ್ಕು ಜಿಲ್ಲೆಗಳಿವೆ, ಕಿತ್ತಳೆ ಬಣ್ಣದ ವಲಯದಲ್ಲಿ 8 ಜಿಲ್ಲೆಗಳಿವೆ, ಹಸಿರುವ ವಲಯದಲ್ಲಿ 12 ಜಿಲ್ಲೆಗಳಿವೆ. 

ಕೆಂಪು ವಲಯವಾಗಿ ಗುರುತಿಸಿರುವ  ಜಿಲ್ಲೆಗಳಲ್ಲಿ ಲಾಕ್‍ಡೌನ್ ನಿರ್ಬಂಧ ಮುಂದುವರಿಯಲಿದ್ದು, ಮೇ 3ರನಂತರವೂ ಲಾಕ್‌ಡೌನ್ ತೆರವುಗೊಳಿಸಲಾಗುವುದಿಲ್ಲ.ಅದೇ ವೇಳೆ ಜಿಲ್ಲೆಯೊಳಗೆ ಮತ್ತು ಅಂತರ್ ಜಿಲ್ಲಾ ಸಂಚಾರಕ್ಕೂ ನಿರ್ಬಂಧ ವಿಧಿಸಿದೆ.

ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರಧಾನ ಕಾರ್ಯದರ್ಶಿಗಳಿಗೆ ಕೇಂದ್ರ ಆರೋಗ್ಯ ಇಲಾಖೆಯ ಕಾರ್ಯದರ್ಶಿ ಪ್ರೀತಿ ಸುದಾನ್ ಪತ್ರ ಕಳಿಸಿದ್ದು, ಕೆಲವೊಂದು  ಜಿಲ್ಲೆಗಳನ್ನು ಕೆಂಪು ವಲಯ ಮಾಡಬೇಕು ಎಂದು ಕೆಲವು ರಾಜ್ಯಗಳು ಬೇಡಿಕೆ ಮುಂದಿಟ್ಟಿವೆ.

ಪ್ರತಿಯೊಂದು ಜಿಲ್ಲೆಯನ್ನೂ ನಾಲ್ಕು ವಲಯಗಳಾಗಿ ವಿಂಗಡಿಸಿದ್ದು, ಇವು ಬೇರೆ ಬೇರೆ ರಾಜ್ಯಗಳಿಂದ ವ್ಯತ್ಯಸ್ತವಾಗಿರುತ್ತವೆ. ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ, ದ್ವಿಗುಣವಾಗುವ  ಪ್ರಮಾಣ ಇವುಗಳನ್ನು ಆಧರಿಸಿ ಈ ರೀತಿ ವಲಯಗಳನ್ನಾಗಿ ವಿಂಗಡಿಸಲಾಗಿದೆ.

ಯಾವ ಜಿಲ್ಲೆಗಳು ಯಾವ ವಲಯ? ಇಲ್ಲಿದೆ ಪಟ್ಟಿ.

ಕೆಂಪು ವಲಯ 

ಬೆಂಗಳೂರು ನಗರ
ಮೈಸೂರು
ಬೆಳಗಾವಿ
ವಿಜಯಪುರ
ಕಲಬುರಗಿ
ಬಾಗಲಕೋಟೆ 

 

ಹಳದಿ ವಲಯ 

ಉಡುಪಿ 
ಉತ್ತರ ಕನ್ನಡ 
ತುಮಕೂರು 
ಗದಗ 
 

ಕಿತ್ತಳೆ ವಲಯ 

ಮಂಡ್ಯ
ಧಾರವಾಡ
ಬಳ್ಳಾರಿ 
ಬೀದರ್‌ 
ದಕ್ಷಿಣ ಕನ್ನಡ 
ಬೆಂಗಳೂರು ಗ್ರಾಮಾಂತರ 
ಚಿಕ್ಕಬಳ್ಳಾಪುರ 
ದಾವಣಗೆರೆ

ಹಸಿರು ವಲಯ 

ಯಾದಗಿರಿ 
ರಾಯಚೂರು 
ಕೊಪ್ಪಳ
ಹಾವೇರಿ 
ಚಿತ್ರದುರ್ಗ
ಶಿವಮೊಗ್ಗ 
ಚಿಕ್ಕಮಗಳೂರು 
ಹಾಸನ 
ರಾಮನಗರ 
ಕೊಡಗು 
ಕೋಲಾರ 
ಚಾಮರಾಜನಗರ 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು