ಕುಮಾರಸ್ವಾಮಿ ಪೇಪರ್ ಟೈಗರ್: ಸಿ.ಟಿ.ರವಿ ವ್ಯಂಗ್ಯ

7

ಕುಮಾರಸ್ವಾಮಿ ಪೇಪರ್ ಟೈಗರ್: ಸಿ.ಟಿ.ರವಿ ವ್ಯಂಗ್ಯ

Published:
Updated:
Deccan Herald

ಚಿಕ್ಕಮಗಳೂರು: ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಪಡೆದ ಸಾಲ ಮನ್ನಾ ವಿಚಾರದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪೇಪರ್ ಟೈಗರ್ ಆಗಿದ್ದಾರೆ ಎಂದು ಶಾಸಕ ಸಿ.ಟಿ.ರವಿ ಟೀಕಿಸಿದರು.

‘ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಸಾಲವನ್ನು ರಾಜ್ಯ ಸರ್ಕಾರ ಪಾವತಿಸುತ್ತದೆ ಎಂದು ಬ್ಯಾಂಕುಗಳಿಗೆ ರಾಜ್ಯ ಸರ್ಕಾರ ಆದೇಶ ನೀಡಿಲ್ಲ. ಸಾಲ ಮನ್ನಾ ಮಾಡಿದ್ದೇವೆಂದು ಕುಮಾರಸ್ವಾಮಿ ಅವರು ಪತ್ರಿಕಾ ಹೇಳಿಕೆ ನೀಡುತ್ತಿದ್ದಾರೆ. ಅದರಿಂದ ರೈತರಿಗೆ ಪ್ರಯೋಜನವಾಗುತ್ತಿಲ್ಲ. ಈ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಪ್ರಶ್ನಿಸಲಾಗುವುದು’ ಎಂದು ಅವರು ಭಾನುವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

‘ರೈತರ ಸಾಲ ಮರುಪಾವತಿ ಆಗದಿದ್ದರೆ, ಸಾಲ ಕೊಟ್ಟ ಬ್ಯಾಂಕಿನವರು ಸುಮ್ಮನಿರುತ್ತಾರಾ? ರೈತರಿಗೆ ನೋಟಿಸ್ ನೀಡುತ್ತಾರೆ. ಸಾಲ ಮನ್ನಾದಡಿ ರೈತರ ಸಾಲವನ್ನು ಸರ್ಕಾರ ಮರುಪಾವತಿಸುವ ಬಗ್ಗೆ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಮೂಲಕ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಆದೇಶ ಹೊರಡಿಸಬೇಕು’ ಎಂದು ಒತ್ತಾಯಿಸಿದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !