ಹೊಸದುರ್ಗ: ತಾಲ್ಲೂಕಿನ ಕೆಲ್ಲೋಡು ಬಳಿಯ ವೇದಾವತಿ ನದಿಗೆ ಮಂಗಳವಾರ ನಸುಕಿನಲ್ಲಿ 407 ವಾಹನ ಪಲ್ಟಿಯಾದ ಪರಿಣಾಮ ಚಾಲಕ ಸಾವನ್ನಪ್ಪಿದ್ದಾರೆ.

ಬೆಂಗಳೂರಿನ ಡಿ. ಹನುಮಂತಪ್ಪ(43) ಮೃತವ್ಯಕ್ತಿ. ಹ್ಯಾಂಡ್‌ಪೋಸ್ಟ್ ಕಡೆಯಿಂದ ವೇಗವಾಗಿ ಬಂದ ವಾಹನ ಚಾಲಕರ ಅಜಾಗರೂಕತೆಯಿಂದ ಇಲ್ಲಿನ ವೇದಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಐತಿಹಾಸಿಕ ಕೃಷ್ಣ ರಾಜೇಂದ್ರ ಸೇತುವೆ ಪಕ್ಕದಲ್ಲಿ ಪಲ್ಟಿಯಾಗಿದೆ.

ನದಿಯಲ್ಲಿ ಪಲ್ಟಿಯಾಗಿದ್ದ ವಾಹನ ನೋಡಲು ಸಾವಿರಾರು ಜನರು ಸೇರಿದ್ದರಿಂದ ಸಂಚಾರ ಅಸ್ತವ್ಯಸ್ತವಾಗಿತ್ತು. ಹೊಸದುರ್ಗದ ಅಗ್ನಿಶಾಮಕ ಸಿಬ್ಬಂದಿ ನೀರಿನಲ್ಲಿ ಮುಳುಗಿದ್ದ ವಾಹನದೊಳಗಿದ್ದ ಮೃತದೇಹವನ್ನು ಹೊರಗೆ ತಂದರು. ನಂತರ ಕ್ರೇನ್ ಸಹಾಯದಿಂದ ವಾಹನವನ್ನು ಮೇಲಕ್ಕೆ ಎತ್ತಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.