ಸೋಮವಾರ, ಜೂಲೈ 13, 2020
25 °C
ಪ್ರತಿ ತಿಂಗಳು ₹ 4 ಸಾವಿರ ಪ್ರೋತ್ಸಾಹಧನವೂ ಖಾತರಿ ಇಲ್ಲ

ಗ್ರಾಮೀಣ ‘ಆಶಾ’ರನ್ನು ತಲುಪಿಲ್ಲ ₹ 3 ಸಾವಿರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗ್ರಾಮೀಣ ಭಾಗದಲ್ಲಿ ಕೊರೊನಾ ಸೇನಾನಿಗಳಾಗಿ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಇನ್ನೂ ₹ 3 ಸಾವಿರ ಪ್ರೋತ್ಸಾಹಧನ ತಲುಪಿಯೇ ಇಲ್ಲ. ನಗರ ಪ್ರದೇಶಗಳು, ಜಿಲ್ಲಾ ಕೇಂದ್ರಗಳಲ್ಲಿರುವ ಆಶಾ ಕಾರ್ಯಕರ್ತೆಯರಿಗೆ ಸಹಕಾರ ಇಲಾಖೆಯಿಂದ ನೀಡಲಾಗುತ್ತಿರುವ ₹ 3 ಸಾವಿರ ಲಭಿಸಿದೆ. ಅವರಿಗೆ ಚೆಕ್‌ ಕೊಟ್ಟಿದ್ದಕ್ಕೆ ಪ್ರಚಾರವೂ ಸಿಕ್ಕಿದೆ. ಗ್ರಾಮೀಣ ಭಾಗ
ದಲ್ಲಿ ಕೊಟ್ಟರೆ ಪ್ರಚಾರ ಸಿಗುವುದಿಲ್ಲ ಎಂಬ ಕಾರಣದಿಂದ ಅದು ಗ್ರಾಮೀಣ ಭಾಗದತ್ತ ಬಂದಿಲ್ಲ ಎಂದು ಹಲವಾರು ಕಾರ್ಯಕರ್ತೆಯರು ಆರೋಪಿಸಿದರು.

‘ಆಶಾ ಕಾರ್ಯಕರ್ತೆಯರಿಗೆ ನಿಶ್ಚಿತವಾಗಿ ಕೈ ಸೇರುತ್ತಿರುವುದು ₹ 4 ಸಾವಿರ ಮಾತ್ರ. ಸರ್ಕಾರ ಈ ರೀತಿಯಲ್ಲಿ ನಡೆಸಿಕೊಂಡರೆ ಬಹಳ ಅಪಾಯ ಎದುರಾಗಬಹುದು’ ಎಂದು ಸಿಐಟಿಯು ರಾಜ್ಯ ಘಟಕದ ಅಧ್ಯಕ್ಷೆ ಎಸ್.ವರಲಕ್ಷ್ಮಿ ಹೇಳಿದರು.

‘ಈಗಾಗಲೇ 18,941 ಆಶಾ ಕಾರ್ಯಕರ್ತೆಯರಿಗೆ ₹ 5.94 ಕೋಟಿ ಗೌರವಧನ ನೀಡಲಾಗಿದೆ. ಯಾರಿಗೂ ಬಾಕಿ ಉಳಿಸಿಕೊಳ್ಳುವುದಿಲ್ಲ’ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಿಂಗಳಿಗೆ ₹12 ಸಾವಿರ ಗೌರವಧನಕ್ಕೆ ಆಗ್ರಹ
‘ತಿಂಗಳಿಗೆ ₹12 ಸಾವಿರ ಗೌರವಧನ ನೀಡಬೇಕು’ ಎಂದು ಆಗ್ರಹಿಸಿ ಆಶಾ ಕಾರ್ಯಕರ್ತೆಯರು ನಗರದಲ್ಲಿ ಮಂಗಳವಾರ ಸಾಂಕೇತಿಕ ಪ್ರತಿಭಟನೆ ನಡೆಸಿದರು.

ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಹಾಗೂ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ಸಹಯೋಗದಲ್ಲಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಮಲ್ಲೇಶ್ವರದಲ್ಲಿರುವ ಎಐಟಿ ಯುಸಿ ಕಚೇರಿ ಎದುರು ಸೇರಿದ್ದ ಕಾರ್ಯಕರ್ತೆಯರು, ‘ಬೇಡಿಕೆ ಈಡೇರಿಕೆಗೆ ಸರ್ಕಾರ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಜುಲೈ 10ರಿಂದ ರಾಜ್ಯದಾದ್ಯಂತ ಆರೋಗ್ಯ ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆ ಆರಂಭಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಆಶಾ ಕಾರ್ಯರ್ತೆಯರು ಕೊರೊನಾ ಸೇನಾನಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಗೌರವ ಧನ ಹೆಚ್ಚಿಸುವ ಜೊತೆ ಯಲ್ಲೇ ಗುಣಮಟ್ಟದ ಮಾಸ್ಕ್, ಫೇಸ್ ಶಿಲ್ಡ್, ಸ್ಯಾನಿಟೈಸರ್, ಗ್ಲೌಸ್‌ಗಳನ್ನು’ ಎಂದೂ ಒತ್ತಾಯಿಸಿದರು.

ಮನವಿ ಸಲ್ಲಿಕೆ: ಎಐಯುಟಿಯುಸಿ ಬೆಂಗಳೂರು ಜಿಲ್ಲಾ ಘಟಕದ ಕಾರ್ಯ ದರ್ಶಿ ಜಿ.ಹನುಮೇಶ್ ನೇತೃತ್ವದ ನಿಯೋಗವು ಉಪಮುಖ್ಯಮಂತ್ರಿಅಶ್ವತ್ಥನಾರಾಯಣ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

*
ಆಶಾ ಕಾರ್ಯಕರ್ತೆಯರಿಗೆ ₹ 6.74 ಕೋಟಿ ಗೌರವಧನ ನೀಡಲು ಬಾಕಿ ಇದೆ, ಈ ತಿಂಗಳೊಳಗೆ ಸಂದಾಯ ಮಾಡಲಾಗುವುದು -ಎಸ್‌.ಟಿ.ಸೋಮಶೇಖರ್‌, ಸಹಕಾರ ಸಚಿವ 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು