‘ಡಿಲಿಟ್‌’ ಆದ ದೃಶ್ಯಕ್ಕೆ ಮೆಚ್ಚುಗೆ

7

‘ಡಿಲಿಟ್‌’ ಆದ ದೃಶ್ಯಕ್ಕೆ ಮೆಚ್ಚುಗೆ

Published:
Updated:
Deccan Herald

ರಶ್ಮಿಕಾ ಮಂದಣ್ಣ, ನಾಗಾರ್ಜುನ ಮತ್ತು ನಾನಿ ನಟಿಸಿರುವ ತೆಲುಗಿನ ಆ್ಯಕ್ಷನ್‌ ಕಾಮಿಡಿ ಚಿತ್ರ ‘ದೇವದಾಸ್‌’ನಿಂದ ಕಿತ್ತುಹಾಕಲಾಗಿದ್ದ ದೃಶ್ಯ ಈಗ ಸಾಮಾಜಿಕ ಮಾಧ್ಯಮಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಜನರ ಮನಗೆದ್ದಿದೆ.

ಈ ಚಿತ್ರದಲ್ಲಿ ನಾನಿಯ ‘ಡಾ.ದಾಸ್‌’ ಪಾತ್ರ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ನಾಗಾರ್ಜುನ ಅಕ್ಕಿನೇನಿ ದೇವ ಆಗಿಯೂ, ರಶ್ಮಿಕಾ ಇನ್‌ಸ್ಪೆಕ್ಟರ್‌ ಪೂಜಾ ಆಗಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಆದರೆ ಕೆಲವು ದೃಶ್ಯಗಳಿಗೆ ಸೆನ್ಸಾರ್ ಮಂಡಳಿ ಕತ್ತರಿ ಹಾಕಿತ್ತು.

ಚಿತ್ರ ಬಿಡುಗಡೆಯಾಗುವವರೆಗೂ ಸುಮ್ಮನಿದ್ದ ನಾನಿ, ಹಾಸ್ಯ ಸನ್ನಿವೇಶವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಬಡ ರೋಗಿಗಳ ಬಗ್ಗೆ ಪೂರ್ವಗ್ರಹ ಹೊಂದಿರುವ ಡಾ. ಭಾರದ್ವಾಜ್‌ (ರಾವ್ ರಮೇಶ್‌) ಜೊತೆ ಸಂಭಾಷಣೆ ನಡೆಸುವ ಸನ್ನಿವೇಶ ಅದಾಗಿದೆ. ‘ಡಾ.ದಾಸ್‌ನ ಮುಗ್ಧತೆಯನ್ನು ಮೆಚ್ಚಿಕೊಂಡ ಪ್ರೇಕ್ಷಕರಿಗೆ, ಕತ್ತರಿ ಹಾಕಲಾದ ದೃಶ್ಯವನ್ನು ತೋರಿಸಬೇಕು ಎಂದು ನಾವು ತೀರ್ಮಾನಿಸಿದೆವು. ಡಾ. ದಾಸ್‌, ಡಾ. ಭಾರದ್ವಾಜ್‌ಗೆ ಉತ್ತರ ಕೊಡುತ್ತಿದ್ದಾರೆ ನೋಡಿ’ ಎಂಬ ಟಿಪ್ಪಣಿಯನ್ನೂ ಕೊಟ್ಟಿದ್ದಾರೆ.

ನಾನಿಯ ಈ ಪೋಸ್ಟ್‌ಗೆ ಅನೇಕ ಮಂದಿ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ‘ಈ ದೃಶ್ಯಕ್ಕೆ ಕತ್ತರಿ ಹಾಕುವ ಅಗತ್ಯವೇನಿತ್ತು’ ಎಂದು ಬಹುತೇಕ ಮಂದಿ ಪ್ರಶ್ನಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !