ನನ್ನ ಅವಧಿಯಲ್ಲಿ ರೈತ ಆತ್ಮಹತ್ಯೆ ಇರಲಿಲ್ಲ: ದೇವೇಗೌಡ

ಸೋಮವಾರ, ಏಪ್ರಿಲ್ 22, 2019
31 °C

ನನ್ನ ಅವಧಿಯಲ್ಲಿ ರೈತ ಆತ್ಮಹತ್ಯೆ ಇರಲಿಲ್ಲ: ದೇವೇಗೌಡ

Published:
Updated:
Prajavani

ಶನಿವಾರಸಂತೆ: ‘ನಾನು ದೇಶದ ಪ್ರಧಾನಿಯಾಗಿದ್ದಾಗ ರೈತರು ಆತ್ಮಹತ್ಯೆ ಮಾಡಿಕೊಳ್ಳಲಿಲ್ಲ. ಕೋಮುಶಕ್ತಿ ಬೆಳೆಯಲು ಬಿಡಲಿಲ್ಲ’ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹೇಳಿದರು.

ಸಮೀಪದ ಗಡಿಗ್ರಾಮ ಚಂಗಡಹಳ್ಳಿಯಲ್ಲಿ ಅವರು ಹಾಸನ ಕ್ಷೇತ್ರದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಮತಯಾಚನೆ ಮಾಡಿದರು.

‘ಯಾವುದೇ ಜಾತಿ, ಧರ್ಮವಿರಲಿ ದೇಶದ ಏಕತೆ ಮುಖ್ಯ. ಕೊಡಗು-ಮೈಸೂರು ಕ್ಷೇತ್ರದ ಅಭ್ಯರ್ಥಿ ವಿಜಯಶಂಕರ್ ಗೆಲುವಿಗೆ ಶ್ರಮಿಸಿ’ ಎಂದರು.

ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮಾತನಾಡಿದರು.

ಜೆಡಿಎಸ್ ಕೊಡಗು ಜಿಲ್ಲಾ ವಕ್ತಾರ ಎಂ.ಎ.ಆದಿಲ್ ಪಾಶ, ಉಪಾಧ್ಯಕ್ಷ ಡಿ.ಪಿ.ಬೋಜಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಎಚ್.ಬಿ.ಜಯಮ್ಮ, ಮುಖಂಡರಾದ ಬಿ.ಎನ್.ಮುತ್ತೇಗೌಡ, ಯಸಳೂರು ಹೋಬಳಿ ಅಧ್ಯಕ್ಷ ಗುರುರಾಜ್, ಬೆಂಬಳೂರು ದೇವಪ್ಪ, ಜಾತ್ನಳ್ಳಿ ಪುಟ್ಟಸ್ವಾಮಿಗೌಡ, ಬೆಕ್ಕನಳ್ಳಿ ನಾಗರಾಜ್, ಮುಳ್ಳೂರು ಆನಂದ್, ಸಚಿನ್ ಪ್ರಸಾದ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !