ಅ‍ಪಘಾತವಾದ ಟ್ಯಾಂಕರ್‌ನಿಂದ ಡೀಸೆಲ್ ಸೋರಿಕೆ: ತುಂಬಿಕೊಳ್ಳಲು ನೂಕುನುಗ್ಗಲು

ಮಂಗಳವಾರ, ಜೂನ್ 25, 2019
22 °C

ಅ‍ಪಘಾತವಾದ ಟ್ಯಾಂಕರ್‌ನಿಂದ ಡೀಸೆಲ್ ಸೋರಿಕೆ: ತುಂಬಿಕೊಳ್ಳಲು ನೂಕುನುಗ್ಗಲು

Published:
Updated:
Prajavani

ಭಟ್ಕಳ: ತಾಲ್ಲೂಕಿನ ಬೆಂಗ್ರೆ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಟಿಪ್ಪರ್ ಲಾರಿಯೊಂದು ಡೀಸೆಲ್ ತುಂಬಿದ್ದ ಟ್ಯಾಂಕರ್‌ಗೆ ಸೋಮವಾರ  ಡಿಕ್ಕಿಯಾಯಿತು. ಅದರಿಂದ ಸೋರುತ್ತಿದ್ದ ಡೀಸೆಲ್‌ ಅನ್ನು ಸ್ಥಳೀಯರು ಕ್ಯಾನ್‌ಗಳು, ಬಕೆಟ್‌ಗಳಲ್ಲಿ ತುಂಬಿಕೊಂಡು ಹೋದರು.

ಟ್ಯಾಂಕರ್‌ ಮಂಗಳೂರಿನಿಂದ ಶಿರಸಿಗೆ ತೆರಳುತ್ತಿತ್ತು. ಬೆಂಗ್ರೆಯಲ್ಲಿ ಮುಂದೆ ಸಾಗುತ್ತಿದ್ದ ಟ್ಯಾಂಕರ್‌ ಚಾಲಕ, ಹಂಪ್‌ ದಾಟಿಸಲು ತಕ್ಷಣ ಬ್ರೇಕ್ ಹಾಕಿದ. ಅದೇ ವೇಗದಲ್ಲಿ ಹಿಂದಿನಿಂದ ಬರುತ್ತಿದ್ದ ಟಿಪ್ಪರನ್ನು ಅದರ ಚಾಲಕ ನಿಯಂತ್ರಣ ಸಿಗದೇ ಟ್ಯಾಂಕರ್‌ ಡಿಕ್ಕಿ ಹೊಡೆಸಿದ. ಇದರಿಂದ ಟ್ಯಾಂಕರ್ ಒಡೆದು ಡೀಸೆಲ್ ಸೋರಿಕೆಯಾಯಿತು. 

ಡೀಸೆಲ್ ತುಂಬಿಕೊಳ್ಳಲು ಮತ್ತಷ್ಟು ಜನ ಜಮಾಯಿಸಿ ನೂಕುನುಗ್ಗಲು ಉಂಟಾಯಿತು. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಜನರನ್ನು ಚದುರಿಸಿ, ಡೀಸೆಲ್ ಸೋರಿಕೆಯನ್ನು ತಾತ್ಕಾಲಿಕವಾಗಿ ತಡೆದರು. ರಸ್ತೆಗೆ ಸಾಬೂನು ನೀರು ಚೆಲ್ಲಿ ಸ್ವಚ್ಛಗೊಳಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 3

  Sad
 • 4

  Frustrated
 • 2

  Angry

Comments:

0 comments

Write the first review for this !