ಶುಕ್ರವಾರ, ಸೆಪ್ಟೆಂಬರ್ 20, 2019
21 °C

ಡಿಕೆಶಿ ಬಂಧನ: ರೇಷ್ಮೆ ವಹಿವಾಟು ಬಂದ್, ಶಿಕ್ಷಕರ ದಿನಾಚರಣೆ ಮುಂದೂಡಿಕೆ

Published:
Updated:

ರಾಮನಗರ: ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರ ಬಂಧನ ವಿರೋಧಿಸಿ ರಾಮನಗರ ಜಿಲ್ಲೆಯಲ್ಲಿ ಪ್ರತಿಭಟನೆಯ ಕಾವು ಹೆಚ್ಚಿದೆ. ಬಂಧನ ಖಂಡಿಸಿ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಇದೇ 5ರಂದು ನಡೆಯಬೇಕಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು‌ ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.

ರೇಷ್ಮೆ ಮಾರುಕಟ್ಟೆ ವಹಿವಾಟು ಬಂದ್
ಕನಕಪುರ ರೇಷ್ಮೆಗೂಡು ಮಾರುಕಟ್ಟೆಗೂ ಬಂದ್ ಬಿಸಿ ತಟ್ಟಿದ್ದು, ವಹಿವಾಟು ಸ್ಥಗಿತಗೊಂಡಿದೆ. ಬೆಳಿಗ್ಗೆ ಹರಾಜು ಪ್ರಕ್ರಿಯೆ ಆರಂಭ ಆಗಬೇಕಿತ್ತು. ಆದರೆ ಈವರೆಗೆ ಹರಾಜು ನಡೆದಿಲ್ಲ‌. ಇದರಿಂದ ಗೂಡಿನ ತೂಕ ಕಡಿಮೆ ಆಗಲಿದ್ದು, ರೈತರು‌ ನಷ್ಟ ಅನುಭವಿಸಲಿದ್ದಾರೆ. ಬೆಲೆಯೂ ಕುಸಿಯುವ ಸಾಧ್ಯತೆ‌ ಇದೆ

ಇದನ್ನೂಓದಿ: ಡಿಕೆಶಿ ಬಂಧನ Live: ರೇಷ್ಮೆ ಮಾರುಕಟ್ಟೆ ವಹಿವಾಟು ಬಂದ್

Post Comments (+)