ಗುರುವಾರ , ಜನವರಿ 23, 2020
21 °C

ನಮ್ಮ ತಾಲ್ಲೂಕಿನಲ್ಲಿ ಯಾರೋ ಏನೋ ಮಾಡ್ತಾ ಇದ್ದಾರೆ: ಡಿಕೆಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ನಮ್ಮ ತಾಲ್ಲೂಕಿನಲ್ಲಿ ಯಾರೋ ಏನೋ ಮಾಡ್ತಾ ಇದ್ದಾರೆ. ನಾನು ಕ್ಷೇತ್ರದ ಶಾಸಕನಾಗಿ ನನ್ನ ಕೆಲಸ ಮಾಡುತ್ತಿದ್ದೇನೆ ಅಷ್ಟೇ ಎಂದು ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ಹೇಳಿದರು.

ಯೇಸು ಪ್ರತಿಮೆ ನಿರ್ಮಾಣ ಸಂಬಂಧ ದಾವಣಗೆರೆಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದರು.

ಬಿಜೆಪಿಯವರು ಒಂದು ಕಡೆ ಚರ್ಚ್‌ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದು ಕಡೆ ಯಡಿಯೂರಪ್ಪ ಚರ್ಚ್‌ಗೆ ಭೇಟಿ ನೀಡುತ್ತಿದ್ದಾರಲ್ಲಾ ಎಂಬ ಪ್ರಶ್ನೆಗೆ ‘ಅವರವರ ನೀತಿ, ಧರ್ಮ, ಪಕ್ಷ ಹಾಗೂ ಅವರ ಓಟಿನ ವಿಚಾರ ಅವರು ಏನು ಬೇಕಾದರೂ ಮಾಡಿಕೊಳ್ಳಲಿ, ನಾವು ಯಾಕೆ ತಲೆ ಕೆಡೆಸಿಕೊಳ್ಳಬೇಕು. ನಮಗೆ ಎಲ್ಲಾ ಜನರೂ ಬೇಕು. ನಾನು ಯಾವತ್ತು ಓಟ್ ಬ್ಯಾಂಕ್ ರಾಜಕಾರಣ ಮಾಡುವುದಿಲ್ಲ’ ಎಂದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ವಿಚಾರಕ್ಕೆ ಸಂಬಂಧಪಟ್ಟಂತೆ ‘ನಾನು ಯಾವುದೇ ಸ್ಥಾನದ ಅಕಾಂಕ್ಷಿ ಅಲ್ಲ. ನನ್ನ ಎಲ್ಲೂ ಹೆಸರು ಪ್ರಸ್ತಾಪವಾಗಿಲ್ಲ’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು