ಸೋಮವಾರ, ಜನವರಿ 27, 2020
17 °C

VIDEO| ಪತ್ರಕರ್ತರ ತಂಡಗಳೊಂದಿಗೆ ಡಿಕೆಶಿ ಕ್ರಿಕೆಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಾಂಗ್ರೆಸ್‌ ನಾಯಕ, ಮಾಜಿ ಸಚಿವ ಡಿ.ಕೆ ಶಿವಕುಮಾರ್‌ ಅವರು ಶನಿವಾರ ಪತ್ರಕರ್ತರ ತಂಡಗಳೊಂದಿಗೆ ಕ್ರಿಕೆಟ್‌ ಆಡಿ ಎಲ್ಲರ ಗಮನ ಸಳೆದರು.

ಬೆಂಗಳೂರಿನ ಹೊಸಕೆರೆಹಳ್ಳಿ ಸಮೀಪದ ಪಿಇಎಸ್‌ ಕಾಲೇಜು ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ‘ಇಂಟರ್‌ ಮೀಡಿಯಾ ಟಿ10 ಕ್ರಿಕೆಟ್‌ ಟೂರ್ನಿ‘ ಉದ್ಘಾಟಿಸಿದ ಡಿ.ಕೆ ಶಿವಕುಮಾರ್‌ ಕೆಲ ಹೊತ್ತು ಬ್ಯಾಟ್‌ ಹಿಡಿದು ಚೆಂಡನ್ನು ಬೌಂಡರಿಗೆ ಅಟ್ಟಿದರು. ನಂತರ ಕೆಲ ಓವರ್‌ಗಳಲ್ಲಿ ಅವರು ಬೌಲಿಂಗ್‌ ಕೂಡ ಮಾಡಿದರು.

ಈ ವೇಳೆ ಮಾತನಾಡಿದ ಅವರು ‘ನಾನು ವಾಲಿಬಾಲ್‌, ಕಬ್ಬಡ್ಡಿ ಆಟಗಾರನಾಗಿದ್ದೆ. 20 ವರ್ಷಗಳ ಹಿಂದೆ ಪಂದ್ಯಗಳಲ್ಲೂ ಭಾಗವಹಿಸಿದ್ದೆ. ಆದರೆ, ಈಗ ಸಮಯದ ಅಭಾವದಿಂದ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಆಗುತ್ತಿಲ್ಲ,‘ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು