ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿದಾನಂದಮೂರ್ತಿಗೆ ಪ್ರಶಸ್ತಿ

ಕನ್ನಡ ಪುಸ್ತಕ ಪ್ರಾಧಿಕಾರದ ವಿವಿಧ ವಾರ್ಷಿಕ ಪ್ರಶಸ್ತಿಗಳು ಪ್ರಕಟ
Last Updated 18 ಡಿಸೆಂಬರ್ 2019, 19:23 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರವು 2018ನೇ ಸಾಲಿನ ವಿವಿಧ ವಾರ್ಷಿಕ ಪ್ರಶಸ್ತಿಗಳನ್ನು ಬುಧವಾರ ಪ್ರಕಟಿಸಿದ್ದು, ₹ 75 ಸಾವಿರ ನಗದು ಬಹುಮಾನ ಹೊಂದಿರುವಡಾ.ಎಂ.ಎಂ.ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿಗೆ ಡಾ.ಎಂ.ಚಿದಾನಂದ ಮೂರ್ತಿ ಆಯ್ಕೆಯಾಗಿದ್ದಾರೆ.

ಪ್ರಾಧಿಕಾರದ ಅಧ್ಯಕ್ಷ ಡಾ.ಎಂ.ಎನ್. ನಂದೀಶ್ ಹಂಚೆ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಘೋಷಿಸಿದ್ದಾರೆ. ಅತ್ಯುತ್ತಮ ಪ್ರಕಾಶನ ಪ್ರಶಸ್ತಿಗೆ ‘ಅಭಿನವ ಪ್ರಕಾಶನ’ ಆಯ್ಕೆಯಾಗಿದ್ದು, ಈ ಪ್ರಶಸ್ತಿ₹1ಲಕ್ಷ ನಗದು ಬಹುಮಾನ ಹೊಂದಿದೆ.ಡಾ.ಜಿ.ಪಿ.ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿಗೆ ಕಾರ್ಕಳದ ಪ್ರೊ.ಎಂ.ರಾಮಚಂದ್ರ (₹50 ಸಾವಿರ ನಗದು ಬಹುಮಾನ) ಹಾಗೂ ಡಾ.ಅನುಪಮಾ ನಿರಂಜನ ವೈದ್ಯಕೀಯ ಹಾಗೂ ವಿಜ್ಞಾನ ಸಾಹಿತ್ಯ ಪ್ರಶಸ್ತಿಗೆ ಡಾ.ವಿಜಯಲಕ್ಷ್ಮಿ ಬಾಳೇಕುಂದ್ರಿ (₹20 ಸಾವಿರ ನಗದು ಬಹುಮಾನ) ಭಾಜನರಾಗಿದ್ದಾರೆ. 2018ನೇ ಸಾಲಿನ ಪುಸ್ತಕ ಸೊಗಸು ಹಾಗೂ ಮುದ್ರಣ ಸೊಗಸು ಬಹುಮಾನವನ್ನೂ ಪ್ರಕಟಿಸ
ಲಾಗಿದ್ದು, ಬೆಂಗಳೂರು ಆರ್ಟ್‌ ಫೌಂಡೇಶನ್ ಪ್ರಕಟಿಸಿರುವ ‘ಬಿ.ಜಯರಾಂ ಸಮಕಾಲೀನ ದೃಶ್ಯಕಲೆಯ ಸಾಕ್ಷಿಪ್ರಜ್ಞೆ’ ಕೃತಿ ಪ್ರಥಮ ಬಹುಮಾನಕ್ಕೆ ಆಯ್ಕೆಯಾಗಿದೆ. ವಾರ್ಷಿಕ ಪ್ರಶಸ್ತಿ ಆಯ್ಕೆಯು ಪ್ರಾಧಿಕಾರದ ಎಲ್ಲ ಸದಸ್ಯರ ಉಪಸ್ಥಿತಿಯಲ್ಲಿ ನಡೆದಿದೆ. ಪುಸ್ತಕ ಸೊಗಸು ಮತ್ತು ಮುದ್ರಣ ಸೊಗಸು ಬಹುಮಾನದ ಆಯ್ಕೆ ಸಮಿತಿಯಲ್ಲಿ ಡಾ.ಎಂ.ಎನ್. ನಂದೀಶ್ ಹಂಚೆ, ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಡಿ.ಮಹೇಂದ್ರ, ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ, ಜೋಗಿ, ಕೃಷ್ಣ ರಾಯಚೂರು ಹಾಗೂ ಪ್ರಾಧಿಕಾರದ ಸದಸ್ಯ ಪ್ರಕಾಶ್ ಕಂಬತ್ತಳ್ಳಿ ಇದ್ದರು.

ಎಲ್ಲ ಪ್ರಶಸ್ತಿಗಳನ್ನು ಜ.8ರಂದು ಬೆಂಗಳೂರಿನದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುತ್ತದೆ ಎಂದು ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ಪುಸ್ತಕ ಸೊಗಸು ಹಾಗೂ ಮುದ್ರಣ ಸೊಗಸು ಬಹುಮಾನದ ವಿಜೇತರು

ಬಹುಮಾನ; ನಗದು ಮೊತ್ತ (₹ಗಳಲ್ಲಿ); ಕೃತಿ; ಪ್ರಕಾಶನ ಸಂಸ್ಥೆ

ಮೊದಲನೇ ಬಹುಮಾನ ; 25ಸಾವಿರ ;ಬಿ.ಜಯರಾಂ ಸಮಕಾಲೀನ ದೃಶ್ಯಕಲೆಯ ಸಾಕ್ಷಿಪ್ರಜ್ಞೆ ;ಬೆಂಗಳೂರು ಆರ್ಟ್‌ ಫೌಂಡೇಶನ್

ಎರಡನೇ ಬಹುಮಾನ; 20ಸಾವಿರ; ಕಾಡುಜೇಡ ಹಾಗೂ ಬಾತುಕೋಳಿ ಹೂ ; ಬಳ್ಳಾರಿಯ ಪಲ್ಲವ ಪ್ರಕಾಶನ

ಮೂರನೇ ಬಹುಮಾನ; 10ಸಾವಿರ ; ಜಾಡಮಾಲಿಯ ಜೀವ ಕೇಳುವುದಿಲ್ಲ...! ; ಬಳ್ಳಾರಿಯ ಯಾಜಿ ಪ್ರಕಾಶನ

ಮಕ್ಕಳ ಪುಸ್ತಕ ಸೊಗಸು ಬಹುಮಾನ; 8ಸಾವಿರ; ಉಪನಿಷತ್ತು; ಪ್ರಣತಿ ಹೊನ್ನಾವರ

ಮುಖಪುಟ ಚಿತ್ರ ವಿನ್ಯಾಸ ಬಹುಮಾನ; 10ಸಾವಿರ; ಮಹಾಭಾರತದ ಅನುಸಂಧಾನ ಭಾರತಯಾತ್ರೆ; ಚಂದ್ರನಾಥ ಆಚಾರ್ಯ (ಕಲಾವಿದ)

ಮುಖಪುಟ ಚಿತ್ರಕಲೆಯ ಬಹುಮಾನ; 8ಸಾವಿರ ರನ್ನನ ಕೃತಿರತ್ನ ಪರೀಕ್ಷೆ ; ಎಂ.ಎಸ್.ಪ್ರಕಾಶ್‌ಬಾಬು

ಪುಸ್ತಕ ಮುದ್ರಣ ಸೊಗಸು ಬಹುಮಾನ; 5 ಸಾವಿರ; ಗ್ನಿಶಿಖೆ ಎಂ.ಎನ್. ವ್ಯಾಸರಾವ್ ಸಮಗ್ರ ಕಾವ್ಯ; ಬೆಂಗಳೂರಿನ ಲಕ್ಷ್ಮಿ ಮುದ್ರಣಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT