ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯ ನಟಿ ಉಮಾಶ್ರೀಗೆ ಜೀವಮಾನ ಸಾಧನೆ ಪ್ರಶಸ್ತಿ

2019–20ನೇ ಸಾಲಿನ ನಾಟಕ ಅಕಾಡೆಮಿ ಪ್ರಶಸ್ತಿ ಪ್ರಕಟ
Last Updated 29 ಜುಲೈ 2019, 20:06 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿ 2019–20ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಹಿರಿಯ ನಟಿ ಉಮಾಶ್ರೀ ಅವರು ಜೀವಮಾನದ ಸಾಧನೆ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

25 ಮಂದಿಗೆ ವಾರ್ಷಿಕ ರಂಗ ಪ್ರಶಸ್ತಿ ಹಾಗೂ 4 ಮಂದಿಗೆ ಅಕಾಡೆಮಿ ದತ್ತಿ ಪ್ರಶಸ್ತಿ ಪ್ರಕಟಿಸಲಾಗಿದೆ. ಜೀವಮಾನದ ಸಾಧನೆ ಪ್ರಶಸ್ತಿ ₹ 50 ಸಾವಿರ ಒಳಗೊಂಡಿದ್ದರೆ ವಾರ್ಷಿಕ ಪ್ರಶಸ್ತಿ ₹ 25 ಸಾವಿರ ಹಾಗೂ ದತ್ತಿ ಪ್ರಶಸ್ತಿ ₹ 5 ಸಾವಿರ ನಗದು ಒಳಗೊಂಡಿದೆ ಎಂದು ಅಕಾಡೆಮಿ ಅಧ್ಯಕ್ಷ ಜೆ.ಲೋಕೇಶ್‌ ತಿಳಿಸಿದ್ದಾರೆ.

ವಾರ್ಷಿಕ ರಂಗ ಪ್ರಶಸ್ತಿ ಪುರಸ್ಕೃತರು: ಧರ್ಮೇಂದ್ರ ಅರಸು (ಬೆಂಗಳೂರು), ಗಣೇಶ್‌ ಶೆಣೈ(ಬೆಂಗಳೂರು). ಚಿಕ್ಕಹನುಮಂತಯ್ಯ (ತುಮಕೂರು), ಗ್ಯಾರಂಟಿ ರಾಮಣ್ಣ (ಹಾಸನ), ನಾಗಪ್ಪ ಬಳೆ (ರಾಯಚೂರು), ಪ್ರಭಾಕರ ಕುಲಕರ್ಣಿ (ಬಾಗಲಕೋಟೆ), ಗುರುಬಸಪ್ಪ ಕಲ್ಲಪ್ಪ ಸಜ್ಜನ್‌ (ವಿಜಯಪುರ), ಗೀತಾ ಸುರತ್ಕಲ್‌ (ಮಂಗಳೂರು), ಲಕ್ಷ್ಮೀಪತಿ ಕೋಲಾರ (ಕೋಲಾರ), ಸಣ್ಣಪ್ಪ ಕೊಡಗಳ್ಳಿ (ಮಂಡ್ಯ), ರಾಜ್ ಗೋಪಾಲ ಶೇಟ್‌ (ಉಡುಪಿ), ಎಸ್‌.ತಿಪ್ಪೇಸ್ವಾಮಿ (ಚಳ್ಳಕೆರೆ), ಕೊಟ್ರಪ್ಪ ಚನ್ನಪ್ಪ ಕೊಟ್ರಪ್ಪನವರ್‌ (ಹಾವೇರಿ), ಬಸವರಾಜ ಬಸವಣ್ಣೆಪ್ಪ ಕಡ್ಲೆಣ್ಣವರ (ಧಾರವಾಡ), ಎನ್‌.ಮಂಜಮ್ಮ, ಗುಬ್ಬಿ (ಗದಗ), ಅರುಣ್‌ ಸಾಗರ್‌ (ಬೆಂಗಳೂರು), ಎಚ್‌.ಎಸ್‌.ಪ್ರಸನ್ನ (ಸಾಗರ), ಈಶ್ವರಪ್ಪ ಫರ್ಹಾತಾಬಾದ್‌ (ಕಲಬುರ್ಗಿ), ವೆಂಕಟೇಶ್‌ (ಪ್ರಭಾತ್‌ ಕಲಾವಿದರು) (ಬೆಂಗಳೂರು), ಉಮೇಶ್‌ ಎಂ.ಸಾಲಿಯಾನ್‌ (ಕಾಸರಗೋಡು), ವೆಂಕಟೇಶ್‌ ಮೂರ್ತಿ (ಚಿಕ್ಕನಾಯಕನಹಳ್ಳಿ), ಜಯಕುಮಾರ್‌ ಕೊಡಗನೂರು (ದಾವಣಗೆರೆ), ಮಾ.ಬ.ಸೋಮಣ್ಣ (ಬಳ್ಳಾರಿ), ವಿಜಯಕುಮಾರ್‌ ಜತೂರಿ (ಗದಗ).

ಅಕಾಡೆಮಿ ದತ್ತಿ ಪ್ರಶಸ್ತಿ: ಲಿಂಗರಾಜ ದಂಡಿನ ಕಲ್ಲೂರ, ವಿಜಯಪುರ (ಕಲ್ಚರ್ಡ್‌ ಕಮೆಡಿಯನ್‌ ಕೆ.ಹಿರಣ್ಣಯ್ಯ ದತ್ತಿ ಪುರಸ್ಕಾರ), ಶಂಕರ ಹಿಪ್ಪರಗಿ, ಕಲಬುರ್ಗಿ (ನಟರತ್ನ ಚಿಂದೋಡಿ ವೀರಪ್ಪನವರ ದತ್ತಿ ಪುರಸ್ಕಾರ), ಅನ್ನಪೂರ್ಣಾ ಹೊಸಮನಿ, ಹುಬ್ಬಳ್ಳಿ (ಪದ್ಮಶ್ರೀ ಚಿಂದೋಡಿ ಲೀಲಾ ದತ್ತಿ ಪುರಸ್ಕಾರ), ಮಾ.ಭಾಸ್ಕರ್‌, ಬೆಂಗಳೂರು (ಕೆ.ರಾಮಚಂದ್ರಯ್ಯ ದತ್ತಿನಿಧಿ ಪುರಸ್ಕಾರ).

ಸೋಮವಾರ ಮಧ್ಯಾಹ್ನ 2 ಗಂಟೆಗೆ ಅಕಾಡೆಮಿ ಸಭೆಯಲ್ಲಿ ಪ್ರಶಸ್ತಿಯ ಆಯ್ಕೆ ನಡೆದಿದೆ. ಇದಕ್ಕೆ ತಡೆ ಒಡ್ಡಲು ನೂತನ ಸರ್ಕಾರ ಮುಂದಾದರೆ ನ್ಯಾಯಾಲಯದ ಮೆಟ್ಟಿಲು ಏರಲಾಗುವುದು ಎಂದು ಲೋಕೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT