‘ಪತಿಗೆ 5 ಗರ್ಲ್‌ಫ್ರೆಂಡ್‌ಗಳಿದ್ದಾರೆ’: ದುನಿಯಾ ವಿಜಯ್‌ರ ಮೊದಲ ಪತ್ನಿ ಆರೋಪ

7

‘ಪತಿಗೆ 5 ಗರ್ಲ್‌ಫ್ರೆಂಡ್‌ಗಳಿದ್ದಾರೆ’: ದುನಿಯಾ ವಿಜಯ್‌ರ ಮೊದಲ ಪತ್ನಿ ಆರೋಪ

Published:
Updated:

ಬೆಂಗಳೂರು: ಜಿಮ್ ತರಬೇತುದಾರ ಮಾರುತಿ ಗೌಡ ಅವರನ್ನು ಅಪಹರಿಸಿ ಹಲ್ಲೆ ಮಾಡಿದ ಆರೋಪದಡಿ ಜೈಲು ಸೇರಿದ್ದ ನಟ ದುನಿಯಾ ವಿಜಯ್, ಜಾಮೀನು ಮೇಲೆ ಜೈಲಿನಿಂದ ಹೊರಬರುತ್ತಿದ್ದಂತೆ ಅವರ ಕೌಟುಂಬಿಕ ಕಲಹ ತಾರಕಕ್ಕೇರಿದೆ.

ಹೊಸಕೆರೆಹಳ್ಳಿಯ ಮನೆಯಲ್ಲಿ ಸೋಮವಾರ ರಾತ್ರಿ ಸುದ್ದಿಗಾರರ ಜೊತೆ ಮಾತನಾಡಿದ ದುನಿಯಾ ವಿಜಯ್, ‘ಕೀರ್ತಿಗೌಡ ನನ್ನ ಪತ್ನಿ. ವಕೀಲರ ಸಮ್ಮುಖದಲ್ಲೇ ಮೊದಲ ಪತ್ನಿ ಜೊತೆ ಸಂಧಾನ ಮಾಡಿಕೊಂಡು ದೂರವಾಗಿದ್ದೇನೆ. ಮನೆಯನ್ನು ಆಕೆಯ ಹೆಸರಿಗೆ ಬರೆದುಕೊಟ್ಟು, ನಾನು ಈಗ ಬಾಡಿಗೆ ಮನೆಯಲ್ಲಿದ್ದೇನೆ. ಮೂವರು ಮಕ್ಕಳ ಹೆಸರಿಗೂ ಆಸ್ತಿ ಬರೆದಿದ್ದೇನೆ’ ಎಂದರು.

‘ನನ್ನ ತಂದೆ–ತಾಯಿಗೂ ಮೊದಲ ಪತ್ನಿ ವಿಪರೀತ ಕಿರುಕುಳ ನೀಡಿದ್ದಳು. ತಮ್ಮ ಅಂತ್ಯಕ್ರಿಯೆಗೂ ಆಕೆ ಬರಬಾರದು ಎಂದು ತಂದೆ–ತಾಯಿ ವಿಲ್ ಬರೆದಿಟ್ಟಿದ್ದಾರೆ. ನಾನೂ ಅದನ್ನೇ ಮಾಡಿದ್ದೇನೆ. ಅಷ್ಟಾದರೂ ಆಕೆ ಪದೇ ಪದೇ ಸುಳ್ಳು ಹೇಳುತ್ತ ನನ್ನನ್ನು ಬೀದಿಗೆ ತರುತ್ತಿದ್ದಾಳೆ’ ಎಂದು ದೂರಿದರು.

ಆ ಬಗ್ಗೆ ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಮೊದಲ ಪತ್ನಿ ನಾಗರತ್ನ, ‘ವಿಜಯ್ ಹಾಗೂ ಕೀರ್ತಿ, ಕಾನೂನಿನ ಪ್ರಕಾರ ಮದುವೆ ಆಗಿಲ್ಲ. ಆಕೆ, ಆಸ್ತಿ ಹಾಗೂ ದುಡ್ಡಿಗಾಗಿ ಬಂದಿದ್ದಾಳೆ. ಪತಿಯ ವರ್ತನೆ ಸಹಿಸಿಕೊಂಡು ಸಾಕಾಗಿದೆ. ನಾನು ಯಾವತ್ತೋ ಸಾಯಬೇಕಿತ್ತು. ಮಕ್ಕಳ ಮುಖ ನೋಡಿಕೊಂಡು ಬದುಕಿದ್ದೇನೆ’ ಎಂದರು.

‘ಸಿನಿಮಾ ಶೂಟಿಂಗ್‌ ವೇಳೆ ನೂರಾರು ಹುಡುಗಿಯರು ಪರಿಚಯ ಆಗುತ್ತಾರೆ. ಅವರೆಲ್ಲರ ಜೊತೆಗೆ ಓಡಾಡಬೇಕಾಗುತ್ತದೆ. ಅದನ್ನೆಲ್ಲ ನೀನು ಕೇಳಬಾರದು ಎಂದು ಪತಿ ಹೇಳುತ್ತಿದ್ದರು. ನನ್ನ ಅತ್ತೆ ಮಗಳನ್ನು ಮನೆಗೆ ಕರೆತಂದಾಗ, ಆಕೆಗೆ ಮುತ್ತು ಕೊಟ್ಟು ಅಸಭ್ಯವಾಗಿ ವರ್ತಿಸುತ್ತಿದ್ದರು. ಮದುವೆ ಆಗುವ ಹುಡುಗಿಗೆ ಆ ರೀತಿ ಮಾಡಿದರೆ ಆಕೆಯ ಭವಿಷ್ಯ ಏನಾಗುತ್ತದೆ ಎಂಬ ಜ್ಞಾನವೂ ಪತಿಗೆ ಇರಲಿಲ್ಲ’ ಎಂದು ಆರೋಪಿಸಿದರು.      

‘ವಿಜಯ್‌ಗೆ ಸಂಬಂಧಗಳು ಹೊಸದೇನಲ್ಲ. ಅವರಿಗೆ ಐವರು ಗರ್ಲ್‌ಫ್ರೆಂಡ್‌ಗಳಿದ್ದಾರೆ. ಕೀರ್ತಿ ಗೌಡ, ಐದನೆಯವಳು. ಕುಮಾರಸ್ವಾಮಿ ಲೇಔಟ್, ಚನ್ನಮ್ಮನಕೆರೆ ಅಚ್ಚುಕಟ್ಟು, ಕತ್ರಿಗುಪ್ಪೆ, ತ್ಯಾಗರಾಜನಗರದಲ್ಲೂ ಅವರಿಗೆ ಮನೆಗಳಿವೆ. ಈಗ ಅವರು ಕೀರ್ತಿ ಜೊತೆ ಹೊಸಕೆರೆಹಳ್ಳಿಯ ಮನೆಯಲ್ಲಿದ್ದಾರೆ. ನಟಿಯೊಬ್ಬಳ ಕಾರಣದಿಂದಲೇ ಅವರು ನನಗೆ ವಿಚ್ಛೇದನ ಕೊಡಲು ಮುಂದಾಗಿದ್ದರು’ ಎಂದು ದೂರಿದರು.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !