ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

400 ಎಲೆಕ್ಟ್ರಿಕ್ ಬಸ್‌ ಗುತ್ತಿಗೆ ಪಡೆಯಲು ಟೆಂಡರ್

Last Updated 20 ಸೆಪ್ಟೆಂಬರ್ 2019, 19:44 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಸಂಚಾರ ಆರಂಭಿಸಲು ಸಾರಿಗೆ ನಿಗಮಗಳು ಮುಂದಾಗಿದ್ದು, ಫೇಮ್ ಇಂಡಿಯಾ ಯೋಜನೆಯಡಿ 400 ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆಯಲು ಟೆಂಡರ್ ಕರೆದಿವೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಯಾಂತ್ರಿಕ ವಿಭಾಗ ಟೆಂಡರ್ ಪ್ರಕ್ರಿಯೆ ಆರಂಭಿಸಿದೆ. ಬಿಎಂಟಿಸಿ 300 ಬಸ್‌ಗಳನ್ನು ಪಡೆದುಕೊಳ್ಳಲಿದೆ. ಕೆಎಸ್‌ಆರ್‌ಟಿಸಿ ಮತ್ತು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡಬ್ಲ್ಯುಕೆಆರ್‌ಟಿಸಿ) ತಲಾ 50 ಬಸ್‌ಗಳನ್ನು ಪಡೆಯಲು ನಿರ್ಧರಿಸಿವೆ.

ಅಂತರ ನಗರ ಸಂಚಾರಕ್ಕಾಗಿ ಕೆಎಸ್‌ಆರ್‌ಟಿಸಿಗೆ ಹವಾನಿಯಂತ್ರಿತ ಡಿಲಕ್ಸ್‌ (ಎಲೆಕ್ಟ್ರಿಕ್ ಟೈಪ್–3) ಬಸ್‌ಗಳು, ಬೆಂಗಳೂರು ನಗರದಲ್ಲಿ ಸಂಚಾರಕ್ಕೆ ಬಿಎಂಟಿಸಿಗೆ ಹವಾನಿಯಂತ್ರಿತ (ಎಲೆಕ್ಟ್ರಿಕ್ ಟೈಪ್–1) ಬಸ್‌ಗಳು, ನಗರ ಸಂಚಾರ ಮತ್ತು ಬಿಆರ್‌ಟಿಸಿ ಕಾರ್ಯಾಚರಣೆಗಾಗಿ ಎನ್‌ಡಬ್ಲ್ಯುಕೆಆರ್‌ಟಿಸಿಗೆ ಹವಾನಿಯಂತ್ರಿತ ಡಿಲಕ್ಸ್‌ ಬಸ್‌ಗಳನ್ನು ಒದಗಿಸಲು ಟೆಂಡರ್ ಕರೆಯಲಾಗಿದೆ.

ಬಸ್‌ಗಳ ಖರೀದಿ, ಕಾರ್ಯಾಚರಣೆ ಮತ್ತು ನಿರ್ವಹಣೆ ಜವಾಬ್ದಾರಿ ಟೆಂಡರ್ ಪಡೆದ ಸಂಸ್ಥೆಯದ್ದು. ಅದಕ್ಕೆ ಬೇಕಿರುವ ಚಾರ್ಚಿಂಗ್ ಪಾಯಿಂಟ್‌ಗಳು ಮತ್ತು ಚಾಲಕರನ್ನೂ ಒದಗಿಸಬೇಕೆಂಬ ಷರತ್ತನ್ನೂ ವಿಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT