ಮಂಗಳವಾರ, ಸೆಪ್ಟೆಂಬರ್ 17, 2019
24 °C

ಪ್ರಶ್ನೆ ಪತ್ರಿಕೆಯಲ್ಲಿ ಕಾಗುಣಿತ ದೋಷ: ಪರೀಕ್ಷೆ ಮುಂದಕ್ಕೆ

Published:
Updated:

ಧಾರವಾಡ:ಕರ್ನಾಟಕ ವಿಶ್ವವಿದ್ಯಾಲಯದ ಬಿ.ಇಡಿ ಮತ್ತು ಬಿ.ಎ 1 ಮತ್ತು 3ನೇ ಸೆಮಿಸ್ಟರ್‌ನ ಪ್ರಶ್ನೆ ಪತ್ರಿಕೆಗಳಲ್ಲಿ (ಕನ್ನಡ ಆವೃತ್ತಿ) ವಿಪರೀತ ಕಾಗುಣಿತ ದೋಷಗಳು ಇವೆ ಎನ್ನುವ ಕಾರಣಕ್ಕೆ ಇದೇ 5ರವರೆಗೆ ನಡೆಯಬೇಕಿದ್ದ ಪರೀಕ್ಷೆಗಳನ್ನು ಮುಂದೂಡಲಾಗಿದೆ.

ಬಿ.ಇಡಿಯ ಶೈಕ್ಷಣಿಕ ತಂತ್ರಜ್ಞಾನ, ಸಮನ್ವಯ ಶಿಕ್ಷಣ ಮತ್ತು ಬಾಲಾವಸ್ಥೆ ಮತ್ತು ಕಿಶೋರಾವಸ್ಥೆ ಎಂಬ ವಿಷಯಗಳ ಪ್ರಶ್ನೆ ಪತ್ರಿಕೆಯಲ್ಲಿ ಹಾಗೂ ಬಿ.ಎ.ಮೂಲ ಕನ್ನಡ ವಿಷಯ ಪ್ರಶ್ನೆ ಪತ್ರಿಕೆಗಳಲ್ಲಿ ಕಾಗುಣಿತ ದೋಷ ಕಂಡಬಂದಿದ್ದವು.

‘ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಿದ ಪ್ರಾಧ್ಯಾಪಕರು ಮತ್ತು ಅವುಗಳನ್ನು ಮುದ್ರಿಸಿದ ಮುದ್ರಣಾಲಯದ ಮಾಲೀಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು’ ಎಂದು ಕುಲಪತಿ ಪ್ರೊ. ಪ್ರಮೋದ ಗಾಯಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೈಬರಹದಲ್ಲಿ ಬರೆದ ಪ್ರಶ್ನೆಪತ್ರಿಕೆಯನ್ನು ಮುಚ್ಚಿದ ಲಕೋಟೆಯಲ್ಲಿ ಮುದ್ರಣಾಲಯಕ್ಕೆ ಕಳುಹಿಸಲಾಗುತ್ತದೆ. ಮುದ್ರಣದ ನಂತರ ಅದರ ಕರಡು ತಿದ್ದುವುದು ಅವರದೇ ಜವಾಬ್ದಾರಿ. ಅಲ್ಲಿಂದ ಮುಚ್ಚಿದ ಲಕೋಟೆಯಲ್ಲೇ ವಿಶ್ವವಿದ್ಯಾಲಯಕ್ಕೆ ಬರುತ್ತದೆ. ಹೀಗಾಗಿ ಇಲ್ಲಿ ಮುದ್ರಣಾಲಯದ ಲೋಪವೂ ಇದೆ. ಇವರಿಬ್ಬರ ವಿರುದ್ಧ ಕ್ರಮಕೈಗೊಳ್ಳುವುದರ ಬಗ್ಗೆ ಇದೇ 6ರ ಸಭೆಯಲ್ಲಿ ತೀರ್ಮಾನಿಸಲಾಗುವುದು’ ಎಂದರು.

Post Comments (+)