ಸೋಮವಾರ, ಅಕ್ಟೋಬರ್ 14, 2019
24 °C

ಕುಮಾರಸ್ವಾಮಿ, ಸಿದ್ದರಾಮಯ್ಯಗೆ ಹುಚ್ಚು: ಕೆ.ಎಸ್‌ ಈಶ್ವರಪ್ಪ

Published:
Updated:

ದಾವಣಗೆರೆ: ಅಧಿಕಾರ ಕಳೆದುಕೊಂಡಿರುವ ಕಾರಣ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿಗೆ ಹುಚ್ಚು ಹಿಡಿದಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಸಿದ್ದರಾಮಯ್ಯ 2ನೇ ಬಾರಿ ಮುಖ್ಯಮಂತ್ರಿ ಆಗಲಿಲ್ಲ. ವಿರೋಧ ಪಕ್ಷದ ನಾಯಕನಾಗಲು ಈಗ ವಿಲಿವಿಲಿ ಒದ್ದಾಡುತ್ತಿದ್ದಾರೆ. ಅದಕ್ಕಾಗಿ ಟೀಕೆಗಾಗಿ ಟೀಕೆ ಮಾಡುತ್ತಿದ್ದಾರೆ. ಆರ್ಥಿಕ ಪರಿಸ್ಥಿತಿಯ ಬಗ್ಗೆ ಅವರ ಮಾತುಗಳು ನಾಟಕ ಎಂದು ಟೀಕಿಸಿದರು.

ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭ ರಾಜ್ಯದಲ್ಲಿ ಬರಗಾಲ ಇತ್ತು. ಆ ಪ್ರದೇಶಗಳಿಗೆ ಬನ್ನಿ ಅಂದರೆ ಬರಲಿಲ್ಲ. ನೀವಾದರೂ ಬನ್ನಿ ಎಂದು ದೇವೇಗೌಡ ಮತ್ತು ಸಿದ್ಧರಾಮಯ್ಯ ಅವರಿಗೆ ಮನವಿ ಮಾಡಿದೆ. ಸಚಿವರನ್ನಾದರೂ ಜಿಲ್ಲೆಗಳಿಗೆ ಕಳುಹಿಸಿ ಎಂದರೂ ಏನೂ ಪ್ರಯೋಜನ ಆಗಲಿಲ್ಲ. ಈಗ ಮಾತನಾಡುತ್ತಿದ್ದಾರೆ ಎಂದರು.

13 ರಾಜ್ಯಗಳಲ್ಲಿ ನೆರೆ ಬಂದಿದೆ. ಎಲ್ಲ ರಾಜ್ಯಗಳ ನಷ್ಟ ಪರಿಶೀಲಿಸಿ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡುತ್ತಿದೆ. ಮೊನ್ನೆಯ ವರೆಗೆ ಹಣ ಬಂದಿಲ್ಲ ಎಂದು ಟೀಕಿಸುತ್ತಿದ್ದರು. ಈಗ ₹1200 ಕೋಟಿ ಬಿಡುಗಡೆಯಾದ ಮೇಲೆ ಇಷ್ಟೇನಾ... ಇದೇ ಕೊನೆಕಂತು ಎಂದೆಲ್ಲ ಹೇಳುತ್ತಿದ್ದಾರೆ ಎಂದರು.

ರಾಮಮಂದಿರ ಆಗಬೇಕು ಎನ್ನುವುದು ಜನರ ತೀರ್ಮಾನ. ಸುಪ್ರೀಂಕೋರ್ಟ್ ಕೈಗೆತ್ಯಿಕೊಂಡಿದೆ. ಜನರ ತೀರ್ಮಾನಕ್ಕೆ ಸುಪ್ರೀಂ ಕೋರ್ಟ್ ಸಹಕಾರ ನೀಡುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

Post Comments (+)