ಶುಕ್ರವಾರ, ಜುಲೈ 1, 2022
26 °C

ಚಂದ್ರಯಾನ–2: ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ಚಿತ್ರಗಳ ಹಾವಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಚಂದ್ರಯಾನ–2 ನೌಕೆಯು ನಿರೀಕ್ಷೆಯಂತೆ ಚಂದ್ರನತ್ತ ಸಾಗುತ್ತಿದ್ದರೆ, ಬಾಹ್ಯಾಕಾಶ ನೌಕೆ ‘ಬಾಹುಬಲಿ’ ಸೆರೆ ಹಿಡಿದ ಚಿತ್ರಗಳೆಂದು, ಕೆಲವು ವ್ಯಕ್ತಿಗಳು ನಕಲಿ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಈ ಚಿತ್ರಗಳು ವೈರಲ್‌ ಆಗಿವೆ. ‘ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಚಿತ್ರಗಳು ನಮ್ಮ ನೌಕೆ ಸೆರೆ ಹಿಡಿದದ್ದು ಅಲ್ಲ. ಈವರೆಗೂ ಯಾವುದೇ ಚಿತ್ರಗಳನ್ನು ಬಿಡುಗಡೆ ಮಾಡಿಲ್ಲ’ ಎಂದು ಇಸ್ರೊ ವಿಜ್ಞಾನಿಗಳು ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಬಾಹ್ಯಾಕಾಶದಿಂದ ಚಿತ್ರೀಕರಿಸಿರುವ ಭೂಮಿಯ ಚಿತ್ರಗಳನ್ನು ಹರಿ ಬಿಟ್ಟು, ಇಸ್ರೊ ನೌಕೆ ಸೆರೆ ಹಿಡಿದ ಚಿತ್ರಗಳೆಂದು ಮಾಹಿತಿಯಲ್ಲಿ ಸೇರಿಸಲಾಗಿದೆ. ಸಾಮಾನ್ಯವಾಗಿ ಯಾವುದೇ ನೌಕೆ ಉಡಾವಣೆಗೊಂಡು ಕಕ್ಷೆಗೆ ಸೇರುವ ವಿಡಿಯೊವನ್ನು ಇಸ್ರೊ ಬಿಡುಗಡೆ ಮಾಡುತ್ತದೆ. ಈವರೆಗೂ ಇಸ್ರೊ ಅಧಿಕೃತವಾಗಿ ವಿಡಿಯೊ ಬಿಡುಗಡೆ ಮಾಡಿಲ್ಲ. ಆದರೆ, ನಕಲಿ ಚಿತ್ರಗಳು ಸಾರ್ವಜನಿಕರಲ್ಲಿ ಸಾಕಷ್ಟು ಸಂಚಲನ ಮೂಡಿಸಿವೆ. ಬಾಹ್ಯಾಕಾಶ ನೌಕೆ ಎಷ್ಟು ಅದ್ಭುತವಾಗಿ ಚಿತ್ರಗಳನ್ನು ಸೆರೆ ಹಿಡಿದಿದೆ ಎಂಬ ಅಭಿಪ್ರಾಯಗಳೂ ಕೇಳಿ ಬಂದಿವೆ. ‘ನಮ್ಮದಲ್ಲದ ಚಿತ್ರಗಳನ್ನು ಇಸ್ರೊ ಹೆಸರಿನಲ್ಲಿ ಹಂಚುವುದು ತಪ್ಪು’ ಎಂದೂ ವಿಜ್ಞಾನಿಗಳು ಹೇಳಿದ್ದಾರೆ.

ಚಂದ್ರಯಾನ–2 ನೌಕೆ ಭೂ ಕಕ್ಷೆಯಲ್ಲಿದ್ದು, ಅದರ(ಕಕ್ಷೆ) ಎತ್ತರವನ್ನು ಹಂತ ಹಂತವಾಗಿ ಮೇಲೇರಿಸುವ ಕಾರ್ಯ ಯಶಸ್ವಿಯಾಗಿ ನಡೆದಿದೆ. ಈಗ ಬಾಹ್ಯಾಕಾಶ ನೌಕೆ ಭೂಮಿಯಿಂದ 54,689 ಕಿ.ಮೀ ದೂರದಲ್ಲಿದೆ.


ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆಗುತ್ತಿರುವ ಇನ್ನೊಂದು ಚಿತ್ರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು