ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತನ ಬಾಳು ಬೆಳಗಿದ ಬಾಳೆ: ಗ್ರಾಹಕರಿಗೆ ನೇರ ಮಾರಾಟ, ₹10 ಲಕ್ಷ ಗಳಿಕೆ

Last Updated 18 ಏಪ್ರಿಲ್ 2020, 1:36 IST
ಅಕ್ಷರ ಗಾತ್ರ

ಶಿರಹಟ್ಟಿ (ಗದಗ): ತಾಲ್ಲೂಕಿನ ಮಾಗಡಿ ಗ್ರಾಮದ ರೈತ ರಘುರೆಡ್ಡಿ ಶತರಡ್ಡಿ ಐದು ಎಕರೆಯಲ್ಲಿ ಹನಿ ನೀರಾವರಿ ಅಳವಡಿಸಿ ಬೆಳೆದಿದ್ದ ಬಾಳೆಯನ್ನು ತಾವೇ ಗ್ರಾಹಕರಿಗೆ ಮಾರಾಟ ಮಾಡಿ ₹10 ಲಕ್ಷ ಗಳಿಸಿದ್ದಾರೆ.

ಇವರು ಕಳೆದ ವರ್ಷ ₹11 ಲಕ್ಷ ಆದಾಯ ಗಳಿಸಿದ್ದರು. ಈ ವರ್ಷ ಹೆಚ್ಚಿನ ನಿರೀಕ್ಷೆಯಲ್ಲಿದ್ದರು. ಆದರೆ, ಲಾಕ್‌ಡೌನ್‌ ತಣ್ಣೀರೆರಚಿತು. ಧೃತಿಗೆಡದ ರಘುರೆಡ್ಡಿ ಬಾಳೆಕಾಯಿಯನ್ನು ಹಣ್ಣು ಮಾಡಿ ಮಾರಾಟ ಮಾಡುತ್ತಿದ್ದಾರೆ.

ಸುತ್ತಲಿನ ಗ್ರಾಮಗಳಿಗೆ ಟ್ರಾಕ್ಟರ್‌ನಲ್ಲಿ ಕೊಂಡೊಯ್ದು ಮಾರಾಟ ಮಾಡುವುದರಿಂದ ಹೆಚ್ಚಿನ ಲಾಭ ಸಿಗುತ್ತಿದೆ. ಮೂವರಿಗೆ ತಾತ್ಕಾಲಿಕ ಉದ್ಯೋಗವನ್ನೂ ಒದಗಿಸಿದ್ದಾರೆ.

‘ವ್ಯಾಪಾರಿಗಳಿಗೆ ಮಾರಾಟ ಮಾಡಿದ್ದರೆ, ಇದಕ್ಕಿಂತ ಕಡಿಮೆ ಆದಾಯ ಬರುತ್ತಿತ್ತು. ಈಗ ಅದಕ್ಕಿಂತಲೂ ಉತ್ತಮ ಆದಾಯ ಬಂದಿದೆ’ ಎಂದು ಪ್ರತಿಕ್ರಿಯಿಸುತ್ತಾರೆ ರಘುರೆಡ್ಡಿ.

ಬಾಳೆಕಾಯಿ ಹಣ್ಣು ಮಾಡಲು ತೋಟದಲ್ಲೇ ತಗಡಿನ ಶೆಡ್‌ ನಿರ್ಮಿಸಿದ್ದಾರೆ. ಗೊನೆಗಳನ್ನು ಕಟಾವು ಮಾಡಿ, ಚಿಪ್ಪುಗಳನ್ನು ಬೇರ್ಪಡಿಸಿ,
ಶುದ್ಧ ನೀರಿನಿಂದ ತೊಳೆದು, ಒಣಗಿಸಿದ ನಂತರ, ಬಾಳೆಎಲೆ, ತಾಡಪತ್ರಿ ಹೊದೆಸಿ ಹಣ್ಣಾಗಲುಇಡುತ್ತಾರೆ. ಎರಡು ದಿನಗಳ ನಂತರ ಕಾಯಿಗಳು ನೈಸರ್ಗಿಕವಾಗಿ ಹಣ್ಣಾಗಿರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT